Kannada Prayer Points – Serial No. 9
ದೇವರಿಗೆ ಮಹಿಮೆ
ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ
ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36
Prayer Points – (Serial No 9)
I1. ಹಬಕ್ಕೂಕ 3:2 ಯುಗದ ಮಧ್ಯದಲ್ಲಿ ದೇವರು ತನ್ನ ರಕ್ಷಣಕಾರ್ಯವನ್ನು ಪುನಃಮಾಡಿ ರೋಷಗೊಂಡಿದ್ದರೂ ಕರುಣೆಯಿಂದ ರಕ್ಷಣ ಕಾರ್ಯವನ್ನೂ ಪ್ರಸಿದ್ಧಿಪಡಿಸುವುದಕ್ಕಾಗಿ ಪ್ರಾರ್ಥಿಸೋಣ.
I2. ಹಬಕ್ಕೂಕ 2:14 ನಾವು ಹೊಂದಲಿರುವ ಯೆಹೋವನ ಮಹಿಮೆಯ ಕುರಿತಾದ (ಥೆಸಲೋನಿಕದವರಿಗೆ 2:14) ಜ್ಞಾನವೂ ನಮ್ಮಲ್ಲಿ ತುಂಬುವುದಕ್ಕಾಗಿ ಪ್ರಾರ್ಥಿಸೋಣ.
I3. ಹಬಕ್ಕೂಕ 3:3 ಯೇಸು ತನ್ನ ಮಹಿಮೆಯ ಪ್ರಭಾವದಿಂದ ಬರುವಾಗ ಆಕಾಶಮಂಡಲವೂ ಪ್ರಭಾವದಿಂದ ಆವರಿಸಿ ಭೂಮಂಡಲ ಆತನ ಮಹಿಮೆಯಿಂದ ತುಂಬುವುದಕ್ಕಾಗಿ ಪ್ರಾರ್ಥಿಸೋಣ.
I4. ಜೆಫನ್ಯ 2:3 ಯೆಹೋವನ ನಿಯಮವನ್ನು ಕೈಕೊಂಡ ದೀನರಾಗಿದ್ದು ದೇವರ ಸದ್ಧರ್ಮವನ್ನು ದೈನ್ಯವನ್ನು ಅಭ್ಯಸಿಸುವವರಾಗಿ ಯೆಹೋವನ ಸಿಟ್ಟಿನ ದಿನದಲ್ಲಿ ಮರೆಯಾಗುವುದಕ್ಕಾಗಿ ಪ್ರಾರ್ಥಿಸೋಣ.
I5. ಜೆಫನ್ಯ 3:9 ನಾವು ದೇವರ ಹೆಸರನ್ನೆತ್ತಿ ಪ್ರಾರ್ಥಿಸಿ ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಲು ದೇವರು ನಮ್ಮ ತುಟಿಗಳನ್ನು ಮಾರ್ಪಡಿಸಿ ಶುದ್ಧಮಾಡುವುದಕ್ಕಾಗಿ ಪ್ರಾರ್ಥಿಸೋಣ.
I6. ಜೆಫನ್ಯ 3:15,16 ನಮ್ಮ ಅರಸನಾದ ಯೆಹೋವನು ನಮ್ಮ ಮಧ್ಯೆ ಇರುವುದರಿಂದ ನಾವು ಯಾವ ಕೇಡನ್ನು ಕಾಣದೆ ಭಯಪಡದೆ ಧರ್ಯದಿಂದ ಜೀವಿಸುವುದಕ್ಕಾಗಿ ಪ್ರಾರ್ಥಿಸೋಣ.
I7. ಹಗ್ಗಾಯ 2:23 ನಾವು ದೇವರ ಸೇವಕನಾಗಿದ್ದು ದೇವರು ನಮ್ಮನ್ನು ಆರಿಸಿಕೊಂಡು ತನ್ನ ಕೈಯಲ್ಲಿ ಮುದ್ರೆಯುಂಗುರವಾಗಿ ಮಾಡುವುದಕ್ಕಾಗಿ ಪ್ರಾರ್ಥಿಸೋಣ.
I8. ಹಗ್ಗಾಯ 2:7 ಸಮಸ್ತ ಜನಾಂಗಗಳ ಇಷ್ಟವಸ್ತುವಾದ ಯೇಸು ಬರುವಾಗ ದೇವರು ತನ್ನ ಆಲಯವಾದ ನಮ್ಮ ಶರೀರವನ್ನು ವೈಭವದಿಂದ ತುಂಬಿಸುವುದಕ್ಕಾಗಿ ಪ್ರಾರ್ಥಿಸೋಣ.
I9. ಜಕರ್ಯ 2:5 ದೇವರು ನಮ್ಮ ಸುತ್ತಮುತ್ತಲೂ ಅಗ್ನಿಪ್ರಾಕಾರವಾಗಿ ನಮ್ಮನ್ನು ಕಾಪಾಡಿ ತನ್ನ ವೈಭವವನ್ನು ನಮ್ಮ ಮಧ್ಯೆ ಪ್ರಕಟ್ಟಿಸುವುದಕ್ಕಾಗಿ ಪ್ರಾರ್ಥಿಸೋಣ.
I10. ಜಕರ್ಯ 3:4,5 ದೇವರು ನಮ್ಮ ಕೊಳೆಬಟ್ಟೆಯಾದ ರೋಷವನ್ನು ನಮ್ಮಿಂದ ತೊಲಗಿಸಿ ನಮ್ಮನ್ನು ಶ್ರೇಷ್ಠವಸ್ತ್ರಗಳನ್ನು ತೊಡಿಸಿ ಶುಭ್ರವಾದ ಮುಂಡಾಸವನ್ನು ಸುತುವುದಕ್ಕಾಗಿ ಪ್ರಾರ್ಥಿಸೋಣ.
I11. ಮಲಾಕಿ 2:5 ನಾವು ದೇವರಲ್ಲಿ ಭಯಭಕ್ತಿಯುಳ್ಳವರಾಗುವುದಕ್ಕಾಗಿ ದೇವರು ತನ್ನ ಒಡಂಬಡಿಕೆಯಾದ ಜೀವ ಸುಖವನ್ನು ನಮಗೆ ದಯಪಾಲಿಸಿ ನಾವು ಆತನ ನಾಮದಲ್ಲಿ ಭಯಭಕ್ತಿಯುಳ್ಳವರಾಗಿ ನಡುಗುವವರಾಗುವುದಕ್ಕಾಗಿ ಪ್ರಾರ್ಥಿಸೋಣ.
I12. ಮಲಾಕಿ 3:3 ದೇವರು ಶೋಧಿಸುವ ಅಕ್ಕಸಾಲಿಗನಂತೆಯೂ ಶುದ್ಧೀಕರಿಸುವವನಾಗಿದ್ದು ನಮ್ಮನ್ನು ಶುದ್ಧಿಕರಿಸಿ ನಾವು ಸದ್ದರ್ಮಿಗಳಾಗಿ ಜೀವಿಸುವುದಕ್ಕಾಗಿ ಪ್ರಾರ್ಥಿಸೋಣ.
I13. ಮಲಾಕಿ 3:10 ದೇವರು ಪರಲೋಕದ ದ್ವಾರಗಳನ್ನು ತೆರೆದು ಸ್ಥಳ ಹಿಡಿಯಲಾಗದಾಷ್ಟು ನಮ್ಮ ಮೇಲೆ ಸುವರವನ್ನು (ಅನುಗ್ರಹ) ಸುರಿಸಿ ನಾವು ದೇವರನ್ನು ಅನುಭವಿಸಿ ತಿಳಿಯುವುದಕ್ಕಾಗಿ ಪ್ರಾರ್ಥಿಸೋಣ.
I14. ಮಲಾಕಿ 3:17 ದೇವರು ಕಾರ್ಯಸಾಧಿಸುವ ದಿನದಲ್ಲಿ ನಾವು ದೇವರಿಗೆ ಒಂದು ಸ್ವಕೀಯ ಜನರಾಗಿ ನಾವು ದೇವರಿಂದ ಕರುಣಿಸಲ್ಪಡುವವರಗುವುದಕ್ಕಾಗಿ ಪ್ರಾರ್ಥಿಸೋಣ.
I15. ಮಲಾಕಿ 4:2 ದೇವರ ನಾಮದಲ್ಲಿ ಭಯಭಕ್ತಿಯುಳ್ಳವರಾದ ನಮಗೆ ದೇವರು ಧರ್ಮವೆಂಬ ಸೂರ್ಯನು ಸ್ವಸ್ಥತೆಯನ್ನುಂಟುಮಾಡುವ ಕಿರಣಗಳಾಗಿ ಮಾಡಿ ನಾವು ಕರುಗಳಂತೆ ಕುಣಿದಾಡುವವರಾಗುವುದಕ್ಕಾಗಿ ಪ್ರಾರ್ಥಿಸೋಣ.
Administrator