Kannada Prayer Points – Serial No. 6
ದೇವರಿಗೆ ಮಹಿಮೆ
ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ
ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36
Prayer Points – (Serial No 6)
F1. ಕೀರ್ತನೆ 107:8,9 ನಮ್ಮ ಹಸಿವನ್ನು ಮೃಷ್ಟಾನದಿಂದ ತೃಪ್ತಿಗೊಳಿಸಿ ನಮ್ಮ ಆಶೆಯನ್ನು ಪೂರೈಸಿ ನಾವು ಆತನ ಕೃಪೆಯನ್ನು ಹಾಗೂ ಅದ್ಭುತಗಳನ್ನು ನೆನೆಸಿ ಕೊಂಡಾಡುವುದಕ್ಕಾಗಿ ಪ್ರಾರ್ಥಿಸೋಣ.
F2. ಕೀರ್ತನೆ 119:38 ದೇವರಲ್ಲಿರುವ ನಮ್ಮ ಭಯಭಕ್ತಿಯನ್ನು ಹೆಚ್ಚಿಸುವಂತಹ ದೇವರ ವಾಕ್ಯವನ್ನು ದೇವರು ನಮ್ಮಲ್ಲಿ ನೆರವೇರಿಸುವುದಕ್ಕಾಗಿ ಪ್ರಾರ್ಥಿಸೋಣ.
F3. ಕೀರ್ತನೆ 126:2 ದೇವರು ನಮ್ಮಲ್ಲಿ ಮಹತ್ಕಾರ್ಯಗಳನ್ನು ಮಾಡಿರುವುದರಿಂದ ನಮ್ಮ ಬಾಯಿ ನಗೆಯಿಂದಲೂ ನಮ್ಮ ನಾಲಿಗೆ ಹರ್ಷಗೀತದಿಂದಲೂ ತುಂಬುವುದಕ್ಕಾಗಿ ಪ್ರಾರ್ಥಿಸೋಣ.
F4. ಕೀರ್ತನೆ 133:1-3 ಸಹೋದರ ಪ್ರೀತಿಯಲ್ಲಿ ನಾವು ಒಂದಾಗಿ ಬದುಕಿ ದೇವರು ನಮಗೆ ಆಶೀರ್ವಾದವನ್ನು ಸದಾಕಾಲ ಜೀವವನ್ನು ಆಜ್ಞಾಪಿಸುವುದಕ್ಕಾಗಿ ಪ್ರಾರ್ಥಿಸೋಣ.
F5. ಕೀರ್ತನೆ 145:13,14 ದೇವರು ತಲತಲಾಂತವಾಗಿಯು ನಮಗೆ ಶಾಶ್ವತರಾಜನಾಗಿರುವುದರಿಂದ ನಾವು ಬೀಳುವಾಗೆಲ್ಲಾ ದೇವರು ನಮ್ಮನ್ನು ಎತ್ತಿ ನಮ್ಮನ್ನು ನೆಟ್ಟಗೆ ನಿಲ್ಲುವವರಾಗಿ ಮಾಡುವುದಕ್ಕಾಗಿ ಪ್ರಾರ್ಥಿಸೋಣ.
F6. ಕೀರ್ತನೆ 145:18,19 ಯಥಾರ್ಥವಾಗಿ ಯೆಹೋವನನ್ನು ಮೊರೆಯಿಡುವವರಿಗೆ ಆತನು ಹತ್ತಿರವಿದ್ದು ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸಿ ನಮ್ಮ ಕೂಗನ್ನು ಕೇಳಿ ನಮ್ಮನ್ನು ರಕ್ಷಿಸುವುದಕ್ಕಾಗಿ ಪ್ರಾರ್ಥಿಸೋಣ.
F7. ಜ್ಞಾನೋಕ್ತಿ 24:4 ದೇವರು ತನ್ನ ತಿಳುವಳಿಕೆಯನ್ನು ನಮಗೆ ಕೊಟ್ಟು ನಮ್ಮ ಬದುಕು ಅಮೂಲ್ಯವಾದ ಎಲ್ಲಾ ಆಶೀರ್ವಾದಗಳಿಂದ ತುಂಬುವುದಕ್ಕಾಗಿ ಪ್ರಾರ್ಥಿಸೋಣ.
F8. ಜ್ಞಾನೋಕ್ತಿ 28:20 ನಾವು ದೇವರ ಸನ್ನಿಧಿಯಲ್ಲಿ ನಂಬಿಗಸ್ತರಾಗಿ ಬದುಕಿ ಆಶೀರ್ವಾದಪೂರ್ಣರಾಗಿ ದೇವರ ವಿಷಯದಲ್ಲಿ ಧನವಂತರಾಗುವುದಕ್ಕಾಗಿ ಪ್ರಾರ್ಥಿಸೋಣ.
F9. ಜ್ಞಾನೋಕ್ತಿ 30:8 ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ದೇವರು ನಮಗೆ ಕೊಡದೆ ನಮಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸುವುದಕ್ಕಾಗಿ ಪ್ರಾರ್ಥಿಸೋಣ.
F10. ಪ್ರಸಂಗಿ 2:26 ನಾವು ದೇವರಿಗೆ ಮೆಚ್ಚಿದವರಾಗಿ ಬದುಕಿ ದೇವರು ನಮಗೆ ಜ್ಞಾನವನ್ನು ತಿಳುವಳಿಕೆಯನ್ನು ಸಂತೋಷವನ್ನು ದಯಪಾಲಿಸುವುದಕ್ಕಾಗಿ ಪ್ರಾರ್ಥಿಸೋಣ.
F11. ಯೆಶಾಯ 11:9 ನಾವು ನಮ್ಮ ಬದುಕಿನಲ್ಲಿ ಕೇಡುಮಾಡುವಂತದೋ ಹಾಳುಮಾಡುವಂತದೋ ಎಂದಿಗೂ ಮಾಡದಂತೆ ಯೆಹೋವನ ಜ್ಞಾನದಿಂದ ನಮ್ಮನ್ನು ತುಂಬಿಸುವುದಕ್ಕಾಗಿ ಪ್ರಾರ್ಥಿಸೋಣ.
F12. ಯೆಶಾಯ 26:3,4 ಯೆಹೋವನಲ್ಲಿ ಸದಾ ಭರವಸವಿರುವುದರಿಂದ ಸ್ಥಿರಚಿತ್ತರಾಗಿ ನಾವು ದೇವರಲ್ಲಿ ಭರವಸವಿಟ್ಟು ದೇವರು ನಮ್ಮನ್ನು ಶಾಶ್ವತವಾದ ಶಾಂತಿಯಲ್ಲಿ ಕಾಪಾಡುವುದಕ್ಕಾಗಿ ಪ್ರಾರ್ಥಿಸೋಣ.
F13. ಯೆಶಾಯ 26:12 ನಾವು ನಡಿಸಿದ್ದೆಲ್ಲವನ್ನು ಆತನು ನಮಗೋಸ್ಕರ ನಡಿಸಿಕೊಟ್ಟು ದೇವರು ನಮಗೆ ಸಮಾಧಾನವನ್ನು ವಿಧಿಸುವುದಕ್ಕಾಗಿ ಪ್ರಾರ್ಥಿಸೋಣ.
F14. ಯೆಶಾಯ 28:16 ನಂಬಿಗಸ್ತರಾದ ನಾವು ಆತುರಪಡದಿರಲು ದೇವರು ನಮಗೆ ಸ್ಥಿರವಾದ ಅಸ್ತಿರವಾದ ಕಲ್ಲು ಹಾಗೂ ಪರೀಕ್ಷಿತವಾದ ಮಾನ್ಯವಾದ ಮೂಲೆಗಲ್ಲಾಗಿ ಮಾಡುವುದಕ್ಕಾಗಿ ಪ್ರಾರ್ಥಿಸೋಣ.
F15. ಯೆಶಾಯ 31:5 ಹೆಣ್ಣು ಹಕ್ಕಿಗಳು ಹಾರಾಡುತ್ತಾ ಮರಿಗಳನ್ನು ಕಾಪಾಡುವಂತೆ ಸೇನಾಧೀಶ್ವರನಾದ ಯೆಹೋವನು ನಮ್ಮನ್ನು ಅಪಾಯದಿಂದ ತಪ್ಪಿಸಿ ರಕ್ಷಿಸಿ ಕಾಯುವುದಕ್ಕಾಗಿ ಪ್ರಾರ್ಥಿಸೋಣ.
Administrator