Kannada Prayer Points – Serial No. 5
ದೇವರಿಗೆ ಮಹಿಮೆ
ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ
ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36
Prayer Points – (Serial No 5)
E1. ಕೀರ್ತನೆ 20:5 ಯೆಹೋವನು ನಮ್ಮ ವಿಜ್ಞಾಪನೆಗಳನ್ನು ನೆರವೇರಿಸಿ ನಾವು ಜಯದಲ್ಲಿ ಉತ್ಸಾಹಧ್ವನಿಯೊಡನೆ ದೇವರ ಹೆಸರಿನಲ್ಲಿ ಧ್ವಜ ಎತ್ತುವುದಕ್ಕಾಗಿ ಪ್ರಾರ್ಥಿಸೋಣ.
E2. ಕೀರ್ತನೆ 30:10,11 ದೇವರು ನಮ್ಮ ಪ್ರಾರ್ಥನೆಯನ್ನು ಕೇಳಿ ಕರುಣಿಸಿ ನಮ್ಮ ಗೋಳಾಟವನ್ನು ತಪ್ಪಿಸಿ ಕುಣಿದಾಡುವಂತೆ ಮಾಡಿ ಸಂತೋಷವೆಂಬ ಹರ್ಷ ವಸ್ತ್ರವನ್ನು ನಮಗೆ ಧಾರಣೆ ಮಾಡಿಸುವುದಕ್ಕಾಗಿ ಪ್ರಾರ್ಥಿಸೋಣ.
E3. ಕೀರ್ತನೆ 32:8 ದೇವರು ನಮ್ಮನ್ನು ಉಪದೇಶಿಸಿ ನಡೆಯ ಬೇಕಾದ ಮಾರ್ಗವನ್ನು ತಿಳಿಸಿ ನಮ್ಮನ್ನು ಕಟಾಕ್ಷಿಸಿ ಆಲೋಚನೆ ಹೇಳಿ ನಮ್ಮನ್ನು ಮಾರ್ಗನಡಿಸುವುದಕಾಗಿ ಪ್ರಾರ್ಥಿಸೋಣ.
E4. ಕೀರ್ತನೆ 33:5 ನಾವು ನೀತಿ ನ್ಯಾಯವನ್ನು ಮಾಡುವವರಾಗಿ ನಮ್ಮ ದೇವರಾದ ಯೆಹೋವನು ತನ್ನ ಕೃಪೆಯಿಂದ ನಮ್ಮನ್ನು ತುಂಬಿಸುವುದಕ್ಕಾಗಿ ಪ್ರಾರ್ಥಿಸೋಣ.
E5. ಕೀರ್ತನೆ 34:19,20 ನೀತಿವಂತರ ಕಷ್ಟಗಳಿಂದ ದೇವರು ಅವರನ್ನು ಬಿಡಿಸಿ ಎಲುಬುಗಳು ಒಂದೂ ಮುರಿದು ಹೋಗದಂತೆ ಕಾಪಾಡುವುದಕ್ಕಾಗಿ ಪ್ರಾರ್ಥಿಸೋಣ.
E6. ಕೀರ್ತನೆ 39:4 ನಮ್ಮ ಬದುಕಿನ ಪಯಣದಲ್ಲಿ ನಾವು ಎಷ್ಟೋ ಅಸ್ಥಿರವೆಂದು ತಿಳಿಯಲು ದೇವರು ನಮ್ಮ ಅವಸಾನವನ್ನು ನಮ್ಮ ಜೀವಮಾನವು ಎಷ್ಟು ಎಂಬುದನ್ನು ತಿಳಿಯಪಡಿಸುವುದಕ್ಕಾಗಿ ಪ್ರಾರ್ಥಿಸೋಣ.
E7. ಕೀರ್ತನೆ 45:13,14 ಕಾಂತನ ಮದಲಗಿತ್ತಿಯಾದ ನಾವು ವಿಶೇಷವಾದ ವಸ್ತ್ರಗಳನ್ನು ಧರಿಸಲ್ಪಟ್ಟು ಅಂತಃಪುರದ ರಾಜಕುಮಾರಿಯಾಗಿ ವೈಭವದಿಂದ ದೇವರ ಸನ್ನಿಧಿಗೆ ಬರುವಂತೆ ಮಾಡುವುದಕ್ಕಾಗಿ ಪ್ರಾರ್ಥಿಸೋಣ.
E8. ಕೀರ್ತನೆ 71:7,8 ನಮ್ಮ ಬಾಯಿ ಯಾವಾಗಲು ದೇವರ ಸ್ತೋತ್ರದಿಂದ ಮತ್ತು ಘನತೆಯಿಂದ ತುಂಬಿ ನಾವು ಹಲವರಿಗೆ ಒಂದು ಅದ್ಬುತವಾಗುವುದಕ್ಕಾಗಿ ಪ್ರಾರ್ಥಿಸೋಣ.
E9. ಕೀರ್ತನೆ 81:10 ಯಥಾರ್ಥವಾಗಿ ನಾವು ದೇವರಿಂದ ತುಂಬಿಸಲ್ಪಡುವುದಕ್ಕಾಗಿ ನಮ್ಮ ಬಾಯಿ ಅಗಲವಾಗಿ ತೆರೆದು ದೇವರೊಂದಿಗೆ ಪ್ರಾರ್ಥಿಸುವವರಾಗುವುದಕ್ಕಾಗಿ ಪ್ರಾರ್ಥಿಸೋಣ.
E10. ಕೀರ್ತನೆ 84:6 ನಾವು ಜೀವಿತದ ಕಣ್ಣೀರ ತಗ್ಗನ್ನು ದಾಟುವಾಗ ದೇವರು ಅದನ್ನು ಮುಂಗಾರು ಮಳೆಯಿಂದ ಸಮೃದ್ಧಿಗೊಳಿಸುವುದಕ್ಕಾಗಿ ಪ್ರಾರ್ಥಿಸೋಣ.
E11. ಕೀರ್ತನೆ 91:16 ದೇವರು ನಮ್ಮನ್ನು ದೀರ್ಘಾಯುಷ್ಯಿನಿಂದ ತೃಪ್ತಿಪಡಿಸಿ ತನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವುದಕ್ಕಾಗಿ ಪ್ರಾರ್ಥಿಸೋಣ.
E12. ಕೀರ್ತನೆ 103:3,4 ದೇವರು ನಮ್ಮ ಅಪರಾಧಗಳನ್ನು ಕ್ಷಮಿಸಿ ಸಮಸ್ತ ರೋಗಗಳನ್ನು ವಾಸಿಮಾಡಿ ನಮ್ಮ ಜೀವವನ್ನು ನಾಶದಿಂದ ತಪ್ಪಿಸುವುದಕ್ಕಾಗಿ ಪ್ರಾರ್ಥಿಸೋಣ.
E13. ಕೀರ್ತನೆ 103:5 ಶ್ರೇಷ್ಠವರಗಳಿಂದ ನಮ್ಮ ಆಶೆಯನ್ನು ಪೂರ್ತಿಗೊಳಿಸಿ ಹದ್ದಿಗೆ ಬರುವಂತೆ ನಮ್ಮ ಯೌವನವನ್ನು ತಿರಿಗಿ ಬರಮಾಡುವುದಕ್ಕಾಗಿ ಪ್ರಾರ್ಥಿಸೋಣ.
E14. ಕೀರ್ತನೆ 104:24 ದೇವರು ತನ್ನ ಜ್ಞಾನದಿಂದಿರುವ ಕ್ರಿಯೆಗಳನ್ನು ನಮ್ಮಲ್ಲಿ ಹೆಚ್ಚಿಸಿ ಯೆಹೋವನ ಕೈಕೆಲಸಗಳಲ್ಲಿ ನಾವು ತುಂಬಿದವರಾಗುವುದಕ್ಕಾಗಿ ಪ್ರಾರ್ಥಿಸೋಣ.
E15. ಕೀರ್ತನೆ 107:6,7 ದೇವರು ನಮ್ಮ ಮೊರೆಯನ್ನು ಲಾಲಿಸಿ ಇಕ್ಕಟ್ಟಿನಿಂದ ಬಿಡಿಸಿ ನಾವು ಜನವಿರುವ ಊರನ್ನು ಸೇರುವಂತೆ ದೇವರು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುವುದಕ್ಕಾಗಿ ಪ್ರಾರ್ಥಿಸೋಣ.
Administrator