Kannada Prayer Points – Serial No. 4

Kannada Prayer Points – Serial No. 4
: :

ದೇವರಿಗೆ ಮಹಿಮೆ

ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ

ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36

Prayer Points – (Serial No 4)

D1. 2 ಪೂರ್ವಕಾಲ 15:15 ನಾವು ಪ್ರಮಾಣ ಮಾಡಿ ಪೂರ್ಣಮನಸ್ಸಿನಿಂದ, ತುಂಬಾ ಲವಲವಿಕೆಯಿಂದ ಯೆಹೋವನನ್ನು ಬಯಸಿದರೆ ಯೆಹೋವನು ನಮ್ಮ ಎಲ್ಲಾ ಕಡೆಗಳಲ್ಲಿಯೂ ನಮಗೆ ಸಮಾಧಾನವನ್ನು ಅನುಗ್ರಹಿಸುವುದಕ್ಕಾಗಿ ಪ್ರಾರ್ಥಿಸೋಣ.

D2. 2 ಪೂರ್ವಕಾಲ 29:36 ನೆನೆಸದ ಗಳಿಗೆಯಲ್ಲಿ ನಮ್ಮ ಕಾರ್ಯಗಳು ನೆರವೇರಿ ನಾವು ಸಂತೋಷಿಸಲು ದೇವರು ನಮ್ಮ ಜೀವಿತದ ಎಲ್ಲಾ ಕಾರ್ಯಗಳನ್ನು ನಮಗೆ ಸಿದ್ಧಮಾಡಿಕೊಡುವುದಕ್ಕಾಗಿ ಪ್ರಾರ್ಥಿಸೋಣ.

D3. ಏಜ್ರನು 8:22,31 ನಾವು ನಮ್ಮ ದೇವರನ್ನು ಹುಡುಕುವವರಾಗಿದ್ದು ದೇವರ ಹಸ್ತವು ನಮಗೆ ಅನುಕೂಲವಾಗಿದ್ದು ವೈರಿಯ ಕೈಗೆ ಸಿಕ್ಕದಂತೆ ನಮ್ಮನ್ನು ರಕ್ಷಿಸುವುದಕ್ಕಾಗಿ (ತಪ್ಪಿಸುವುದಕ್ಕಾಗಿ) ಪ್ರಾರ್ಥಿಸೋಣ.

D4. ನೆಹೆಮೀಯ 9:20 ನಮ್ಮನ್ನು ಉಪದೇಶಿಸಲು ದೇವರು ತನ್ನ ಒಳ್ಳೇ ಆತ್ಮನನ್ನು ನಮಗೆ ಕೊಟ್ಟು (ಕೀರ್ತನೆ 143:10) ನಾವು ಶುಭಕಾರಿಯಾಗಿ ನಡೆಸಲ್ಪಡುವುದಕ್ಕಾಗಿ ಪ್ರಾರ್ಥಿಸೋಣ.

D5. ಎಸ್ತೆರಳು 2:12 ನಮ್ಮ ರಾಜಾಧಿರಾಜನಾದ ಕರ್ತನ ಸನ್ನಿಧಿಗೆ ಹೋಗಲು ನಾವು ನಿಯಮದ ಮೇರೆಗೆ ನಮ್ಮ ಶುದ್ಧೀಕರಣ ದಿನಗಳನ್ನು ಪೂರ್ಣಗೊಳಿಸುವುದಕ್ಕಾಗಿ ಪ್ರಾರ್ಥಿಸೋಣ.

D6. ಯೋಬನು 1:10 ನಾವು ದೇವರಲ್ಲಿ ಭಯಭಕ್ತಿಯುಳ್ಳವರಾಗಿರಲು ದೇವರು ನಮಗೂ ನಮ್ಮ ಎಲ್ಲಾ ಸ್ವಾಸ್ಥ್ಯಕ್ಕೂ ಸುತ್ತಮುತ್ತಲು ಬೇಲಿ ಹಾಕಿ ನಮ್ಮ ಕೆಲಸವನ್ನು ಆಶೀರ್ವದಿಸುವುದಕ್ಕಾಗಿ ಪ್ರಾರ್ಥಿಸೋಣ.

D7. ಯೋಬನು 5:26 ನಾವು ನಮ್ಮ ಬದುಕಲ್ಲಿ ಫಲಭರಿತವಾದ ವೃದ್ಧಾಪ್ಯದಲ್ಲಿ ಮರಣಹೊಂದುವುದಕ್ಕಾಗಿ ಪ್ರಾರ್ಥಿಸೋಣ.

D8. ಯೋಬನು 8:21 ದೇವರು ನಮ್ಮ ತುಟಿಗಳನ್ನು ಉತ್ಸಾಹಧ್ವನಿಯಿಂದ ತುಂಬಿಸಿ ನಮ್ಮ ಗುಡಾರಗಳಲ್ಲಿ ಉತ್ಸಾಹಧ್ವನಿಯು ಹಾಗೂ ಜಯಘೋಷವು ಉಂಟಾಗುವುದಕ್ಕಾಗಿ ಪ್ರಾರ್ಥಿಸೋಣ.

D9. ಯೋಬನು 21:23 ನಮ್ಮ ಬದುಕಿನಲ್ಲಿ ನಾವು ಸುಖ ನೆಮ್ಮದಿ ಉಳ್ಳವರಾಗಿ ಸಮೃದ್ಧರಾಗಿ ಮರಣಹೊಂದುವುದಕ್ಕಾಗಿ ಪ್ರಾರ್ಥಿಸೋಣ.

D10. ಯೋಬನು 23:13,14 ದೇವರು ನಾವು ಬಯಸಿದ್ದನ್ನು ನಮಗೆ ನೇಮಕವಾದದ್ದನ್ನು ಪೂರೈಸಿಕೊಡುವುದಕ್ಕಾಗಿ ಪ್ರಾರ್ಥಿಸೋಣ.

D11. ಕೀರ್ತನೆ 4:7,8 - ದೇವರು ನಮ್ಮ ಹೃದಯದಲ್ಲಿ ಹೆಚ್ಚಾದ ಆನಂದವನ್ನು ಉಂಟುಮಾಡಿ ನಾವು ಸುರಕ್ಷಿತರಾಗಿ ಸಮಾಧಾನದಿಂದ ಮಲಗಿಕೊಂಡು ಕೂಡಲೇ ನಿದ್ದೆ ಮಾಡುವುದಕ್ಕಾಗಿ ಪ್ರಾರ್ಥಿಸೋಣ.

D12. ಕೀರ್ತನೆ 5:7 ದೇವರು ತನ್ನ ಮಹಾಕೃಪೆಯನ್ನು ನಮಗೆ ಕೊಟ್ಟು ನಾವು ದೇವರ ಆಲಯದ ಕಡೆಗೆ ಹೋಗಿ ಭಯಭಕ್ತಿಯಿಂದ ದೇವರನ್ನು ಆರಾಧಿಸುವುದಕ್ಕಾಗಿ ಪ್ರಾರ್ಥಿಸೋಣ.

D13. ಕೀರ್ತನೆ 16:11 ದೇವರು ನಮಗೆ ಜೀವಮಾರ್ಗವನ್ನು ತಿಳಿಯಪಡಿಸಿ ದೇವರ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವನ್ನು ಹೊಂದುವವರಾಗಲು ಪ್ರಾರ್ಥಿಸೋಣ.

D14. ಕೀರ್ತನೆ 18:19 ದೇವರು ನಮ್ಮಲ್ಲಿ ಮೆಚ್ಚಿ ನಮ್ಮನ್ನು ವಿಶಾಲಸ್ಥಳಕ್ಕೆ ಸೇರಿಸುವುದಕ್ಕಾಗಿ ಪ್ರಾರ್ಥಿಸೋಣ.

D15. ಕೀರ್ತನೆ 18:32,33 ದೇವರು ನಮ್ಮನ್ನು ಶೌರ್ಯವೆಂಬ ನಡುಕಟ್ಟಿನಿಂದ ಬಿಗಿದು ನಮ್ಮ ಮಾರ್ಗವನ್ನು ಸರಾಗಮಾಡಿ ನಮ್ಮ ಕಾಲುಗಳನ್ನು ಜಿಂಕೆಯ ಕಾಲಿನಂತೆ ಚುರುಕುಮಾಡಿ ನಮ್ಮನ್ನು ಉನ್ನತ ಪ್ರದೇಶದಲ್ಲಿ ನಿಲ್ಲುವಂತೆ ಮಾಡುವುದಕ್ಕಾಗಿ ಪ್ರಾರ್ಥಿಸೋಣ.