Kannada Prayer Points – Serial No. 7

Kannada Prayer Points – Serial No. 7
: :

ದೇವರಿಗೆ ಮಹಿಮೆ

ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ

ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36

Prayer Points – (Serial No 7)

G1. ಯೆಶಾಯ 33:5,6 ನಾವು ಉನ್ನತೋನ್ನತರಾಗಿ ಜೀವಿಸಲು ದೇವರು ನಮ್ಮನ್ನು ನೀತಿನ್ಯಾಯಗಳಿಂದ ತುಂಬಿಸಿ ನಮ್ಮ ಕಾಲದಲ್ಲಿ ಸ್ಥೈರ್ಯದಿಂದಿದ್ದು ಜ್ಞಾನವೂ ತಿಳುವಳಿಕೆಯೂ ರಕ್ಷಣ ಕಾರ್ಯಸಮೃದ್ಧಿಯೂ ಇರುವವರಾಗಿ ಯೆಹೋವನ ಭಯಭಕ್ತಿಯು ನಮಗೆ ನಿಧಿಯಾಗುವುದಕ್ಕಾಗಿ ಪ್ರಾರ್ಥಿಸೋಣ.

G2. ಯೆಶಾಯ 41:10 ದೇವರು ನಮ್ಮ ದೇವರಾಗಿ ನಮ್ಮೊಂದಿಗಿದ್ದು ನಮ್ಮನ್ನು ಬಲಪಡಿಸಿ ಸಹಾಯಮಾಡಿ ತನ್ನ ಧರ್ಮದ ಬಲಗೈಯಿಂದ ನಮ್ಮನ್ನು ಆಧರಿಸುವುದಕ್ಕಾಗಿ ಪ್ರಾರ್ಥಿಸೋಣ.

G3. ಯೆಶಾಯ 44:26 ತನ್ನ ಸೇವಕನ ಮಾತನ್ನು ಸ್ಥಾಪಿಸಿ ತನ್ನ ದೂತರ ಮಂತ್ರಾಲೋಚನೆಯನ್ನು ನೆರವೇರಿಸುವ ದೇವರು ನಮ್ಮ ಸಭೆಯ ಹಾಳನ್ನು ಹಸನುಮಾಡಿ ನಂಬಿಗಸ್ತರಿಂದ ತುಂಬಿಸುವುದಕ್ಕಾಗಿ ಪ್ರಾರ್ಥಿಸೋಣ.

G4. ಯೆಶಾಯ 45:2 ದೇವರು ನಮ್ಮ ಮುಂದೆ ಹೋಗಿ ದಿಣ್ಣೆಗಳನ್ನು ಸಮಮಾಡಿ ತಾಮ್ರದ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿಯುವುದಕ್ಕಾಗಿ ಪ್ರಾರ್ಥಿಸೋಣ.

G5. ಯೆಶಾಯ 45:3 ಇಸ್ರಾಯೇಲ್ಯರ ದೇವರು ನಮ್ಮನ್ನು ಹೆಸರು ಹಿಡಿದು ಕರೆಯುವನು ಎಂದು ನಾವು ತಿಳಿಯುವುದಕ್ಕೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಪಾಸ್ತಿಯನ್ನೂ ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನು ನಮಗೆ ಕೊಡುವುದಕ್ಕಾಗಿ ಪ್ರಾರ್ಥಿಸೋಣ.

G6. ಯೆಶಾಯ 50:4 ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವುದಕ್ಕೆ ಬಲ್ಲವನಾಗುವಂತೆ ಕರ್ತನಾದ ಯೆಹೋವನು ನಮಗೆ ಶಿಕ್ಷಿತರ ನಾಲಿಗೆಯನ್ನು ದಯಪಾಲಿಸಿ ಬೆಳಬೆಳಗೂ ನಮ್ಮನ್ನು ಎಚ್ಚರಿಸುವುದಕ್ಕಾಗಿ ಪ್ರಾರ್ಥಿಸೋಣ.

G7. ಯೆಶಾಯ 62:7 ನಾವು ದೇವರನ್ನು ಜ್ಞಾಪಕಮಾಡಿ ಪ್ರಾರ್ಥಿಸುವುದಕ್ಕೋಸ್ಕರ ದೇವರು ನಮ್ಮ ಜೀವಿತವನ್ನು ಯಥಾಸ್ಥಿತಿಪಡಿಸಿ ಭೂಮಿಯಲ್ಲಿ ಅದನ್ನು ಹೊಗಳುವ ವಿಷಯ ಮಾಡುವುದಕ್ಕಾಗಿ ಪ್ರಾರ್ಥಿಸೋಣ.

G8. ಯೆರೆಮೀಯ 11:4,5 ನಾವು ದೇವರ ಪ್ರಜೆಯಾಗಿದ್ದು ದೇವರು ನಮಗೆ ದೇವರಾಗಿದ್ದು ಹಾಲೂ ಜೇನೂ ಹರಿಯುವ ದೇಶವನ್ನು ಕೊಡುವುದಾಗಿ ಮೂಲಪಿತೃಗಳಿಗೆ ಮಾಡಿದ ವಾಗ್ದಾನ ದೇವರು ನಮಗಾಗಿ ನೆರವೇರಿಸುವುದಕ್ಕಾಗಿ ಪ್ರಾರ್ಥಿಸೋಣ.

G9. ಯೆರೆಮೀಯ 31:3,4 ಶಾಶ್ವತ ಪ್ರೇಮದಿಂದ ದೇವರು ನಮ್ಮನ್ನು ಪ್ರೀತಿಸಿರುವುದರಿಂದ ದೇವರು ನಮ್ಮನ್ನು ಮಮತೆಯಿಂದ ಸೆಳೆದು ನಾವು ಅಭಿವೃದ್ಧಿಹೊಂದುವುದಕ್ಕಾಗಿ ಪ್ರಾರ್ಥಿಸೋಣ.

G10. ಯೆರೆಮೀಯ 32:38,39 ನಮಗೂ ನಮ್ಮ ಮಕ್ಕಳ ಹಿತವನ್ನು ಬಯಸುತ್ತಾ ನಾವು ಸದಾ ದೇವರಲ್ಲಿ ಭಯಭಕ್ತಿಯುಳ್ಳವರಾಗುವಂತೆ ದೇವರು ನಮಗೆ ಒಂದೇ ಮನಸ್ಸನ್ನು ಒಂದೇ ಮಾರ್ಗವನ್ನು ಅನುಗ್ರಹಿಸುವುದಕ್ಕಾಗಿ ಪ್ರಾರ್ಥಿಸೋಣ.

G11. ಯೆರೆಮೀಯ 32:40 ದೇವರಲ್ಲಿರುವ ಭಯಭಕ್ತಿಯು ನಮ್ಮ ಹೃದಯದಲ್ಲಿ ನೆಲೆಗೊಳಿಸಿ ನಾವು ದೇವರನ್ನು ಬಿಟ್ಟು ವಿಮುಕನಾಗದೆ ಇರಲು ದೇವರು ನಮ್ಮಿಂದಗಲದಂತೆ ನಮಗೆ ಒಳಿತ್ತನ್ನು ಮಾಡುವುದಕ್ಕಾಗಿ ಪ್ರಾರ್ಥಿಸೋಣ.

G12. ಯೆರೆಮೀಯ 33:3 ನಾವು ದೇವರನ್ನು ಕೇಳಿ ನಮಗೆ ಸದುತ್ತರವನ್ನು ದಯಪಾಲಿಸಿ ನಾವು ತಿಳಿಯದ ಮಹತ್ತಾದ ಗೂಢಾರ್ಥಗಳನ್ನು ನಮಗೆ ಗೋಚರಪಡಿಸುವುದಕ್ಕಾಗಿ ಪ್ರಾರ್ಥಿಸೋಣ.

G13. ಯೆರೆಮೀಯ 33:6 ದೇವರು ಸೌಖ್ಯವನ್ನು ಆರೋಗ್ಯವನ್ನು ಕೊಟ್ಟು ನಮ್ಮನ್ನು ಗುಣಪಡಿಸಿ ಸ್ಥೈರ್ಯಸಮಾಧಾನಗಳನ್ನು ಸಮೃದ್ಧಿಯಾಗಿ ನಮ್ಮ ಅನುಭವಕ್ಕೆ ತರುವುದಕ್ಕಾಗಿ ಪ್ರಾರ್ಥಿಸೋಣ.

G14. ಯೆರೆಮೀಯ 42:3 ನಾವು ಪ್ರಾರ್ಥಿಸುವಾಗ ದೇವರು ನಾವು ನಡೆಯಬೇಕಾದ ಮಾರ್ಗವನ್ನೂ ಮಾಡತಕ್ಕ ಕಾರ್ಯವನ್ನೂ ನಮಗೆ ತೋರ್ಪಡಿಸುವುದಕ್ಕಾಗಿ ಪ್ರಾರ್ಥಿಸೋಣ.

G15. ಪ್ರಲಾಪಗಳು 3:56,57 ದೇವರು ನಮ್ಮ ನಿಟ್ಟುಸುರಿಗೂ ಮೊರೆಗೂ ಕಿವಿಯನ್ನು ಮರೆಮಾಡಿಕೊಳ್ಳದೆ ನಾವು ಕೂಗಿಕೊಂಡಾಗ ನಮ್ಮ ಸಮೀಪಕ್ಕೆ ಬಂದು ಭಯಪಡಬೇಡ ಎಂದು ಹೇಳುವುದಕ್ಕಾಗಿ ಪ್ರಾರ್ಥಿಸೋಣ.