Kannada Prayer Points – Serial No. 11
ದೇವರಿಗೆ ಮಹಿಮೆ
ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ
ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36
Prayer Points – (Serial No 11)
K1. ಯೋಹಾನ 17:23 ದೇವರು ಯೇಸುವನ್ನು ಪ್ರೀತಿಸಿದಂತೆ ನಮ್ಮನ್ನು ಪ್ರೀತಿಸುತ್ತಿದ್ದಾನೆ ಎಂದು ಲೋಕವು ತಿಳಿಯುವುದಕ್ಕಾಗಿ ದೇವರು ಯೇಸುವಲ್ಲಿ ಯೇಸು ನಮ್ಮಲ್ಲಿಯೂ ನಾವು ಐಕ್ಯದಲ್ಲಿ ಪೂರ್ಣಸಿದ್ಧಿಗೆ ಬರುವುದಕ್ಕಾಗಿ ಪ್ರಾರ್ಥಿಸೋಣ.
K2. ಅಪೋಸ್ತಲ ಕೃತ್ಯ 4:30,31 ದೇವರು ನಮಗೆ ಕೃಪೆಯನ್ನು ಕೊಟ್ಟು ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವುದಕ್ಕಾಗಿ ದೇವರು ಪವಿತ್ರಾತ್ಮದ ತುಂಬುವಿಕೆ ನಮಗೆ ಕೊಡುವುದಕ್ಕಾಗಿ ಪ್ರಾರ್ಥಿಸೋಣ.
K3. ಅಪೋಸ್ತಲ ಕೃತ್ಯ 5:28 ನಮ್ಮ ಊರಿನ ಎಲ್ಲಾ ಕಡೆಯಲ್ಲಿಯೂ ನಾವು ಯೇಸುವಿನ ಉಪದೇಶದಿಂದ ತುಂಬಿಸುವುದಕ್ಕಾಗಿ ದೇವರು ನಮ್ಮನ್ನು ಸಹಾಯ ಮಾಡುವುದಕ್ಕಾಗಿ ಪ್ರಾರ್ಥಿಸೋಣ.
K4. ಅಪೋಸ್ತಲ ಕೃತ್ಯ 6:3 ನಮ್ಮ ಬದುಕಿನಲ್ಲಿ ಪವಿತ್ರಾತ್ಮಭರಿತರು ಜ್ಞಾನಸಂಪನ್ನರೂ ಸಂಭಾವಿತರು ಆಗಿ ದೇವರ ಕ್ರಿಯೆಗಳನ್ನು ನಮಗೆ ಒಪ್ಪಿಸಿಕೊಡುವುದಕ್ಕಾಗಿ ಪ್ರಾರ್ಥಿಸೋಣ.
K5. ಅಪೋಸ್ತಲ ಕೃತ್ಯ 6:5 ನಾವು ದೇವರಿಂದ ಆರಿಸಲ್ಪಟ್ಟವರಾಗಿ ನಮ್ಮ ಬದುಕಿನಲ್ಲಿ ಪವಿತ್ರಾತ್ಮನು ಜ್ಞಾನವೂ ತುಂಬಿದವರಾಗಿ ಒಳ್ಳೆಯ ಸಾಕ್ಷಿಯುಳ್ಳವರಾಗಲು ಪ್ರಾರ್ಥಿಸೋಣ.
K6. ಅಪೋಸ್ತಲ ಕೃತ್ಯ 6:8 ನಾವು ಕೃಪೆಯಿಂದಲೂ ಬಲದಿಂದಲೂ ತುಂಬಿದವರಾಗಿ ನಮ್ಮ ಕೈಗಳಿಂದ ಅದ್ಬುತಕಾರ್ಯಗಳನ್ನು ಹಾಗೂ ಸೂಚಕಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಕ್ಕಾಗಿ ಪ್ರಾರ್ಥಿಸೋಣ.
K7. ಅಪೋಸ್ತಲ ಕೃತ್ಯ 7:55 ನಾವೆಲ್ಲರೂ ಪವಿತ್ರಾತ್ಮ ಭರಿತರಾಗಿ ಆಕಾಶದ ಕಡೆಗೆ ದೃಷ್ಟಿಸಿನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತ್ತಿದ್ದ ಯೇಸುವನ್ನು ಕಾಣಲು ಸಾಧ್ಯವಾಗುವುದಕ್ಕಾಗಿ ಪ್ರಾರ್ಥಿಸೋಣ.
K8. ಅಪೋಸ್ತಲ ಕೃತ್ಯ 9:17 ದೇವರು ನಮ್ಮ ಒಳಕಣ್ಣುಗಳನ್ನು ತೆರೆದು ನಾವು ದೃಷ್ಟಿಯನ್ನು ಹೊಂದಿದವರಾಗಿ ಪವಿತ್ರಾತ್ಮ ಭರಿತರಾಗಿ ಪೂರ್ಣರಾಗಿ ಜೀವಿಸುವುದಕ್ಕಾಗಿ ಪ್ರಾರ್ಥಿಸೋಣ.
K9. ಅಪೋಸ್ತಲ ಕೃತ್ಯ 13:29 ನಮ್ಮ ವಿಷಯವಾಗಿ ಶಾಸ್ತ್ರದಲ್ಲಿ ಬರೆದಿರುವುದೆಲ್ಲವೂ ನಮ್ಮ ಬದುಕಿನಲ್ಲಿ ನೆರವೇರಲು ಸಾಧ್ಯವಾಗುವುದಕ್ಕಾಗಿ ಪ್ರಾರ್ಥಿಸೋಣ.
K10. ಅಪೋಸ್ತಲ ಕೃತ್ಯ 13:32 ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನವೂ ಮಕ್ಕಳಾದ ನಮಗೆ ಯೇಸು ಕ್ರಿಸ್ತನ ಮೂಲಕ ನೆರವೇರಿಸುವುದಕ್ಕಾಗಿ ಪ್ರಾರ್ಥಿಸೋಣ.
K11. ಅಪೋಸ್ತಲ ಕೃತ್ಯ 17:11 ನಾವು ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುವವರಾಗಿದ್ದು ದೇವರ ವಾಕ್ಯವನ್ನು ಶುದ್ಧಮನಸ್ಸಿನಿಂದ ಅಂಗೀಕರಿಸಿ ಉತ್ತಮರಾಗುವುದಕ್ಕಾಗಿ ಪ್ರಾರ್ಥಿಸೋಣ.
K12. ಅಪೋಸ್ತಲ ಕೃತ್ಯ 20:24 ನಾವು ನಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದೇ ವಿಶೇಷವೆಂದು ಎಣಿಸದೆ ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಪ್ರಕಟಿಸಬೇಕೆಂಬದಾಗಿ ಕರ್ತನಾದ ಯೇಸುವಿನಿಂದ ನಾನು ಹೊಂದಿರುವ ಸೇವೆಯೆಂಬ ಓಟವನ್ನು ಕಡೆಗಾಣಿಸುವುದಕ್ಕಾಗಿ ಪ್ರಾರ್ಥಿಸೋಣ.
K13. ಅಪೋಸ್ತಲ ಕೃತ್ಯ 24:2,3 ನಮಗೆ ಬಹು ಸಮಾಧಾನ ಉಂಟಾಗುವುದರಿಂದಲೂ ದೇವರ ಪರಾಂಬರಿಕೆಯಿಂದ ಹೊಂದಿದ್ದ ಉಪಕಾರಗಳನ್ನು ದೇವರ ಸನ್ನಿಧಿಯಲ್ಲಿ ಕೃತಜ್ಞತೆಯಿಂದ ಒಪ್ಪಿಕೊಳ್ಳುವವರಾಗುವುದಕ್ಕಾಗಿ ಪ್ರಾರ್ಥಿಸೋಣ.
K14. ಅಪೋಸ್ತಲ ಕೃತ್ಯ 27:24 ನಮ್ಮ ಬದುಕಿನ ಪ್ರಯಾಣದಲ್ಲಿ ನಮ್ಮೊಂದಿಗೆ ಇರುವವರೆಲ್ಲರನ್ನು ದೇವರು ನಮಗೆ ದಾನವಾಗಿ ಕೊಟ್ಟು ಅವರನ್ನು ಆಪತ್ತು ಗಂಡಾಂತರಗಳಿಂದ ಉಳಿಸಿಕೊಡುವುದಕ್ಕಾಗಿ ಪ್ರಾರ್ಥಿಸೋಣ.
K15. ಅಪೋಸ್ತಲ ಕೃತ್ಯ 28:31 ಯಾವ ಅಡ್ಡಿಯೂ ಇಲ್ಲದೆ ತುಂಬಾ ಧೈರ್ಯದಿಂದ ದೇವರ ರಾಜ್ಯವನ್ನು ಪ್ರಸಿದ್ದಿಪಡಿಸಲು ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡಲು ಪೂರ್ಣ ಮನಸ್ಸುಳ್ಳವರಾಗುವುದಕ್ಕಾಗಿ ಪ್ರಾರ್ಥಿಸೋಣ.
Administrator