Kannada Prayer Points – Serial No. 2
ದೇವರಿಗೆ ಮಹಿಮೆ
ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ
ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36
Prayer Points – (Serial No 2)
B1. ಧರ್ಮೋಪದೇಶ 28:9 ನಮ್ಮ ದೇವರಾದ ಯೆಹೋವನ ಆಜ್ಞೆಗಳನ್ನುಅನುಸರಿಸಿ ಆತನು ಹೇಳಿದ ಮಾರ್ಗದಲ್ಲೇ ನಡೆದು ಆತನು ನಮಗೆ ವಾಗ್ದಾನ ಮಾಡಿದಂತೆ ನಮ್ಮನ್ನು ಮೀಸಲಾದ (ಪರಿಶುದ್ಧವಾದ) ಜನರನ್ನಾಗಿ ಮಾಡುವುದಕ್ಕಾಗಿ ಪ್ರಾರ್ಥಿಸೋಣ.
B2. ಧರ್ಮೋಪದೇಶ 28:11 ದೇವರು ನಮ್ಮ ವ್ಯವಸಾಯವನ್ನು ಸಫಲಮಾಡಿ ನಮಗೆ ಸಮೃದ್ಧಿಯನ್ನು ಉಂಟುಮಾಡಲು ಆಕಾಶದಲ್ಲಿರುವ ತನ್ನ ಜಲನಿಧಿಯನ್ನು ನಮಗೋಸ್ಕರ ತೆರೆಯುವುದಕಾಗಿ ಪ್ರಾರ್ಥಿಸೋಣ .
B3. ಧರ್ಮೋಪದೇಶ 29:8 ದೇವರ ನಿಬಂಧನ ವಾಕ್ಯಗಳನ್ನು ಅನುಸರಿಸಿ ನಡೆದು ನಾವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಅಭಿವೃದ್ಧಿ ಹೊಂದುವುದಕ್ಕಾಗಿ ಪ್ರಾರ್ಥಿಸೋಣ.
B4. ಧರ್ಮೋಪದೇಶ 33:23 ನಾವು ಯೆಹೋವನ ದಯೆಯಿಂದ ಸಂತೃಪ್ತರು ಆತನ ಆಶೀರ್ವಾದದಿಂದ ತುಂಬಿದವರಾಗಿ ದೇವರ ರಾಜ್ಯವನ್ನು ಸ್ವಾಸ್ಥ್ಯಮಾಡುವುದಕ್ಕಾಗಿ ಪ್ರಾರ್ಥಿಸೋಣ.
B5. ಧರ್ಮೋಪದೇಶ 33:26 ನಮ್ಮ ದೇವರಿಗೆ ಸಮಾನನು ಯಾವನು ಇಲ್ಲದರಿಂದ ನಮಗೆ ಸಹಾಯ ಮಾಡಲು ಆತನು ಆಕಾಶವನ್ನೇರಿ ಮೇಘಾರೂಢನಾಗಿ ಮಹಾಗಾಂಭೀರ್ಯದಿಂದ ಬರುವುದಕ್ಕಾಗಿ ಪ್ರಾರ್ಥಿಸೋಣ.
B6. ಯೆಹೋಶುವ 1:9 ನಾವು ಅಂಜದೆ ಕಳವಳಗೊಳ್ಳದೆ ಸ್ಥಿರಚಿತ್ತರು ಧೈರ್ಯದಿಂದಿರಲು ನಾವು ಹೋಗುವಲ್ಲೆಲ್ಲಾ ನಮ್ಮ ದೇವರಾದ ಯೆಹೋವನು ನಮ್ಮ ಸಂಗಡ ಇರುವುದಕ್ಕಾಗಿ ಪ್ರಾರ್ಥಿಸೋಣ.
B7. ಯೆಹೋಶುವ 3:7 ಯೆಹೋವನು ನಮ್ಮ ಸಂಗಡ ಇರುವನೆಂದು ಎಲ್ಲರು ತಿಳಿಯಲು ದೇವರು ನಮ್ಮನ್ನು ಅವರ ಮುಂದೆ ಘನಪಡಿಸುವುದಕ್ಕಾಗಿ ಪ್ರಾರ್ಥಿಸೋಣ.
B8. ಯೆಹೋಶುವ 23:14 ನಮ್ಮ ದೇವರಾದ ಯೆಹೋವನು ನಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗದೆ ನಮ್ಮಲ್ಲಿ ನೆರವೇರಿಸುವುದಕ್ಕಾಗಿ ಪ್ರಾರ್ಥಿಸೋಣ.
B9. ಯೆಹೋಶುವ 24:17 ಮಹತ್ಕಾರ್ಯಗಳನ್ನು ನಡಿಸಿ ನಮ್ಮ ಎಲ್ಲಾ ಪ್ರಯಾಣಗಳಲ್ಲಿಯೂ, ದಾಟಿ ಬಂದ ಅನ್ಯಜನಾಂಗಗಳ ಮಧ್ಯದಲ್ಲಿಯೂ ನಮ್ಮನ್ನು ಕಾಪಡುವುದಕ್ಕಾಗಿ ಪ್ರಾರ್ಥಿಸೋಣ.
B10. ನ್ಯಾಯಸ್ಥಾಪಕರು 6:9 ನಮ್ಮನ್ನು ಹಿಂಸಿಸುವವರ ಕೈಯಿಂದ ದೇವರು ನಮ್ಮನ್ನು ರಕ್ಷಿಸಿ ಕಾಪಡುವುದಕ್ಕಾಗಿ ಪ್ರಾರ್ಥಿಸೋಣ.
B11. ನ್ಯಾಯಸ್ಥಾಪಕರು 15:19 ನಮ್ಮ ಆತ್ಮೀಕ ದಾಹ ತೀರುವಷ್ಟು ಕುಡಿದು ಪುನಃ ಚೈತನ್ಯಹೊಂದಿ ಜೀವಿಸುವುದಕ್ಕಾಗಿ ದೇವರು ನಮಗಾಗಿ ಒಂದು ಒರತೆಯನ್ನು ಹೊರಡಿಸುವುದಕ್ಕಾಗಿ ಪ್ರಾರ್ಥಿಸೋಣ.
B12. ರೂತಳು 1:21 ಯೆಹೋವನು ನಮಗೆ ವಿರೋಧವಾಗಿ ಸಾಕ್ಷಿ ಹೇಳಿ ಸರ್ವಶಕ್ತನು ನಮ್ಮನ್ನು ಭಾಧಿಸಿ (ದುಃಖಪಡಿಸಿ) ನಾವು ಗತಿಹೀನರಾಗಿ ಕಾಣದೆ ದೇವರು ನಮ್ಮನ್ನು ಭಾಗ್ಯವಂತರಾಗಿ (ತುಂಬಿದವರಾಗಿ) ತೀರಿಸುವುದಕ್ಕಾಗಿ ಪ್ರಾರ್ಥಿಸೋಣ.
B13. ರೂತಳು 2:12 ನಮ್ಮ ದೇವರಾದ ಯೆಹೋವನಲ್ಲಿ ಆಶ್ರಯಿಸಿ ನಾವು ಮಾಡುವ ಎಲ್ಲಾ ಕ್ರಿಯೆಗಳಲ್ಲಿಯೂ ದೇವರಿಂದ ಉತ್ತಮವಾದ ಪ್ರತಿಫಲವನ್ನು ಹೊಂದಿಕೊಳ್ಳುವುದಕ್ಕಾಗಿ ಪ್ರಾರ್ಥಿಸೋಣ.
B14. 1 ಸಮುವೇಲ 2:30 ನಾವು ದೇವರನ್ನು ಸನ್ಮಾನಿಸುವವರಾಗಿದ್ದು ನಮ್ಮ ದೇಶದಲ್ಲಿ ತಿರಸ್ಕರಿಸಲ್ಪಡದೆ ದೇವರು ನಮ್ಮನ್ನು ಸನ್ಮಾನಿಸುವುದಕ್ಕಾಗಿ ಪ್ರಾರ್ಥಿಸೋಣ.
B15. 1 ಸಮುವೇಲ 18:14-16 ದೇವರು ನಮ್ಮ ಸಂಗಡ ಇದ್ದು ನಾವು ಎಲ್ಲಾ ಕಾರ್ಯಗಳಲ್ಲಿ ವಿವೇಕದಿಂದ ನಡೆದು ಜನರೆಲ್ಲರೂ ನಮ್ಮನ್ನು ಪ್ರೀತಿಸುವುದಕ್ಕಾಗಿ ಪ್ರಾರ್ಥಿಸೋಣ.
Administrator