Kannada Prayer Points – Serial No. 8

Kannada Prayer Points – Serial No. 8
: :

ದೇವರಿಗೆ ಮಹಿಮೆ

ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ

ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36

Prayer Points – (Serial No 8)

H1. ಯೆಹೆಜ್ಕೆಲ 3:3 ದೇವರು ನಮಗೆ ಕೊಡುವ ದೇವರ ವಾಕ್ಯವು ನಮ್ಮಲ್ಲಿ ಜೇನಿನಂತೆ ಸಿಹಿಯಾಗಿ ತುಂಬುವುದಕ್ಕಾಗಿ ಪ್ರಾರ್ಥಿಸೋಣ.

H2. ಯೆಹೆಜ್ಕೆಲ 12:25 ನಾವು ದ್ರೋಹಿಗಳಾಗದಿರಲು ದೇವರು ನಮ್ಮ ಕಾಲದಲ್ಲಿ ಆತನು ಇಚ್ಛಿಸುವ ತನ್ನ ವಾಕ್ಯವನ್ನು ನೆರವೇರಿಸುವುದಕ್ಕಾಗಿ ಪ್ರಾರ್ಥಿಸೋಣ.

H3. ಯೆಹೆಜ್ಕೆಲ 16:14 ನಮ್ಮ ಚೇಲುವಿಕೆಯ ಹೆಸರುವಾಸಿಯು ಜನಾಂಗಗಳಲ್ಲಿ ಹಬ್ಬುವಂತೆ ದೇವರು ನಮ್ಮನ್ನು ವೈಭವದಿಂದ ಅನುಗ್ರಹಿಸಿ ನಮ್ಮ ಆತ್ಮೀಕ ಸೌಂದರ್ಯವು ಪರಿಪೂರ್ಣವಾಗುವುದಕ್ಕಾಗಿ ಪ್ರಾರ್ಥಿಸೋಣ.

H4. ಯೆಹೆಜ್ಕೆಲ 28:12 ದೇವರು ನಮ್ಮನ್ನು ಪೂರ್ಣ ಜ್ಞಾನಿ, ಪರಿಪೂರ್ಣ ಸುಂದರನಾಗಿ ಮಾಡಿ ನಾವು ದೇವರ ಸರ್ವಸುಲಕ್ಷಣಶಿರೋಮಣಿಯಾಗುವಂತೆ ಪ್ರಾರ್ಥಿಸೋಣ.

H5. ಯೆಹೆಜ್ಕೆಲ 36:38 ಮೀಸಲಾದ ಮಂದೆಯಂತೆ ಇದ್ದ ನಮ್ಮ ಆಲಯವನ್ನು ಹಬ್ಬಗಳಲ್ಲಿ ಸೇರುವ ಜನರ ಗುಂಪಿನಂತೆ ಪರಿಶುದ್ಧರಾದ ಆತ್ಮಗಳಿಂದ ದೇವರು ತುಂಬಿಸುವುದಕ್ಕಾಗಿ ಪ್ರಾರ್ಥಿಸೋಣ.

H6. ದಾನಿಯೇಲ 12:3 ನಾವು ಜ್ಞಾನಿಗಳಾಗಿ ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವವರಾಗಿ ಬಹು ಜನರನ್ನು ಸದ್ದರ್ಮಿಗಳನ್ನಾಗಿ ಮಾಡುವವರಾಗಿ ಯುಗಾಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವುದಕ್ಕಾಗಿ ಪ್ರಾರ್ಥಿಸೋಣ.

H7. ಹೋಶೇಯ 2:14,15 ದೇವರು ನಮ್ಮನ್ನು ಒಲಿಸಿ ಅಡವಿಗೆ ಕರಕೊಂಡು ಹೋಗಿ ನಮ್ಮೊಂದಿಗೆ ಹೃದಯಂಗಮವಾಗಿ ಮಾತಾಡಿ ನಿರೀಕ್ಷೆಯುಳ್ಳವರಾಗಿ ನಾವು ದೇವರಿಗೆ ಒಲುಮೆಯಿಂದಿರುವುದಕ್ಕಾಗಿ ಪ್ರಾರ್ಥಿಸೋಣ.

H8. ಹೋಶೇಯ 14:4 ದೇವರು ನಮ್ಮ ಭ್ರಷ್ಟತ್ವವನ್ನು ಪರಿಹರಿಸಿ ದೇವರ ಕೋಪವು ನಮ್ಮಿಂದ ತೊಲಗಿಹೋಗಿ ದೇವರು ನಮ್ಮನ್ನು ಮನಃಪೂರ್ವಕವಾಗಿ ಪ್ರೀತಿಸುವುದಕ್ಕಾಗಿ ಪ್ರಾರ್ಥಿಸೋಣ.

H9. ಆಮೋಸ 8:11 ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವನ್ನು ದೇವರು ನಮ್ಮ ಮಧ್ಯೆ ಕಳುಹಿಸುವುದಕ್ಕಾಗಿ ಪ್ರಾರ್ಥಿಸೋಣ.

H10. ಯೋನ 4:11 ದೇವರ ಸನ್ನಿಧಿಯಲ್ಲಿ ನಮ್ಮನ್ನೇ ತಗ್ಗಿಸಿ ಮಾನಸಾಂತರ ಹೊಂದುವ ನಮ್ಮೊಂದಿಗೆ ದೇವರು ಕನಿಕರಪಟ್ಟು ನಮ್ಮ ಅಪರಾಧಗಳಿಗೆ ತಕ್ಕಂತೆ ನಮ್ಮನ್ನು ನಾಶಮಾಡದಿರಲು ಪ್ರಾರ್ಥಿಸೋಣ.

H11. ಮೀಕ 3:8 ದೇವರ ಚಿತ್ತದ ಪ್ರಕಾರ ಬದುಕುವವರಿಗೆ ಅವರ ದ್ರೋಹವನ್ನು ಪಾಪವನ್ನು ನೆನಪಿಸುವುದಕ್ಕಾಗಿ ದೇವರಾತ್ಮದಿಂದ ನಾವು ಬಲಪರಾಕ್ರಮನ್ಯಾಯಭರಿತದಿಂದ ತುಂಬಿದವರಾಗಿರುವುದಕ್ಕಾಗಿ ಪ್ರಾರ್ಥಿಸೋಣ.

H12. ಮೀಕ 4:2 ನಾವು ದೇವರ ಮಂದಿರಕ್ಕೆ ಹೋಗುವವರಾದ್ದರಿಂದ ದೇವರು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಭೋಧನೆಮಾಡಿ ನಾವು ದೇವರ ದಾರಿಯಲ್ಲಿ ನಡೆಯುವವರಾಗುವುದಕ್ಕಾಗಿ ಪ್ರಾರ್ಥಿಸೋಣ.

H13. ಮೀಕ 6:8 ದೇವರು ನಮಗೆ ಒಳ್ಳೆಯದು ಇಂಥದೇ ಎಂದು ತೋರಿಸಿ ನಾವು ಕರುಣೆಯಲ್ಲಿ ಆಸಕ್ತರಾಗಿದ್ದು ನ್ಯಾಯವನ್ನು ಆಚರಿಸಿ ದೇವರಿಗೆ ನಮ್ರವಾಗಿ ನಡೆದುಕೊಳ್ಳುವುದಕ್ಕಾಗಿ ಪ್ರಾರ್ಥಿಸೋಣ.

H14. ಮೀಕ 7:7,8 ನಮ್ಮ ರಕ್ಷಕನಾದ ದೇವರನ್ನು ಕಾದು ದೇವರು ನಮ್ಮ ಪ್ರಾರ್ಥನೆಯನ್ನು ಲಾಲಿಸಿ ನಮ್ಮ ಕತ್ತಲಲ್ಲಿ ಬೆಳಕಾಗಿ, ನಾವು ಬಿದ್ದರೂ ಎಬ್ಬಿಸುವವನಾಗಿರುವುದಕ್ಕಾಗಿ ಪ್ರಾರ್ಥಿಸೋಣ.

H15. ಮೀಕ 7:19 ಕರುಣೆಯನ್ನು ಇಷ್ಟಪಡುವವನು ನಮ್ಮನ್ನು ಕರುಣಿಸಿ ನಮ್ಮ ಅಪರಾಧಗಳನ್ನು ಅಣಗಿಸಿ ನಮ್ಮ ಪಾಪಗಳನ್ನು ಸಮುದ್ರದ ತಳಕ್ಕೆ ಬಿಡುವುದಕ್ಕಾಗಿ ಪ್ರಾರ್ಥಿಸೋಣ.