Kannada Prayer Points – Serial No. 1
ದೇವರಿಗೆ ಮಹಿಮೆ
ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ
ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36
Prayer Points – (Serial No 1)
A1. ಆದಿಕಾಂಡ 12:2 ದೇವರು ನಮ್ಮನ್ನು ಆಶೀರ್ವದಿಸಿ ಮತ್ತು ನಾವು ಆಶೀರ್ವಾದವನ್ನು ಹೊಂದಿದ್ದೇವೆ, ಇದರಿಂದ ದೇವರು ನಮ್ಮ ಹೆಸರನ್ನು ದೇಶದಲ್ಲಿ ದೊಡ್ಡದಾಗಿ ಮಾಡುವುದಕ್ಕಾಗಿ (ಯೆಹೋವನಲ್ಲಿ ಆಶೀರ್ವದಿಸಲ್ಪಟ್ಟವರಾಗುವುದಕ್ಕಾಗಿ) ಪ್ರಾರ್ಥಿಸೋಣ.
A2. ಆದಿಕಾಂಡ 24:31 ಕರ್ತನಿಂದ ಆಶೀರ್ವಾದಿಸಲ್ಪಟ್ಟವನೇ ಎಂದು ಯೇಸು ನಮ್ಮನ್ನು ಕರೆದು ಆತನು ನಮಗಾಗಿ ಸಿದ್ಧಮಾಡಿದ ಸ್ಥಳಕ್ಕೆ ನಮ್ಮನ್ನು ತನ್ನ ಹತ್ತಿರಕ್ಕೆ ಸೆಳೆದುಕೊಳ್ಳುವುದಕ್ಕಾಗಿ ಪ್ರಾರ್ಥಿಸೋಣ (ಯೋಹಾನ 14:3).
A3. ಆದಿಕಾಂಡ 25:8 ನಮ್ಮ ಬದುಕಿನಲ್ಲಿ ನಾವು ಪೂಯುಷ್ಯನಾಗಿ ತುಂಬಾ ಮುದುಕನಾಗಿ ಮರಣವನ್ನು ಹೊಂದಿ ದೇವರೊಂದಿಗೆ ಸೇರಿಸಲ್ಪಡುವುದಕ್ಕಾಗಿ ಪ್ರಾರ್ಥಿಸೋಣ (ಎಫೆಸ 4:13).
A4. ಆದಿಕಾಂಡ 27:28 ದೇವರು ತನ್ನ ಆಶೀರ್ವಾದವಾದ ಆಕಾಶದ ಮಳೆಯನ್ನು ಸಾರವುಳ್ಳ ಭೂಮಿಯನ್ನು ನಮಗೆ ಕೊಟ್ಟು ಹೇರಳವಾಗಿ ನಮ್ಮನ್ನು ಆಶೀರ್ವದಿಸುವುದಕ್ಕಾಗಿ ಪ್ರಾರ್ಥಿಸೋಣ.
A5. ಆದಿಕಾಂಡ 28:15 ದೇವರು ನಮ್ಮ ಸಂಗಡವಿದ್ದು ನಾವು ಹೋಗುವ ಪ್ರತಿಯೊಂದು ಸ್ಥಳದಲ್ಲಿಯೂ ನಮ್ಮನ್ನು ಕಾಪಾಡಿ ನಮಗೆ ವಾಗ್ದಾನ ಮಾಡಿದನ್ನು ನೆರವೇರಿಸುವುದಕ್ಕಾಗಿ ಪ್ರಾರ್ಥಿಸೋಣ.
A6. ಆದಿಕಾಂಡ 30:30 ನಾವೂ ಕೈ ಹಾಕಿದ ಎಲ್ಲಾ ಕೆಲಸದಲ್ಲಿಯೂ ಯೆಹೋವನು ನಮ್ಮನ್ನು ಅಭಿವೃದ್ಧಿಪಡಿಸಿ ನಮಗಿರುವ ಎಲ್ಲವನ್ನೂ ಹೆಚ್ಚಿಸುವುದಕ್ಕಾಗಿ ಪ್ರಾರ್ಥಿಸೋಣ.
A7. ವಿಮೋಚನ 20.24 ದೇವರು ತನ್ನ ಹೆಸರನ್ನು ನೆನಪಿಗೆ ಬರಮಾಡುವ ಎಲ್ಲಾ ಸ್ಥಳಗಳಲ್ಲಿಯೂ (ಮತ್ತಾಯ 18.20) ನಮ್ಮ ಬಳಿಗೆ ಬಂದು ನಮ್ಮನ್ನು ಆಶೀರ್ವದಿಸಲು ಪ್ರಾರ್ಥಿಸೋಣ.
A8. ವಿಮೋಚನ 31:5 ಯೆಹೋವನು ತನ್ನ ದಿವ್ಯಾತ್ಮವನ್ನು ಕೊಟ್ಟು ಬೇಕಾದ ಜ್ಞಾನ, ವಿಧ್ಯೆ, ವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ ನಮ್ಮಲ್ಲಿ ಪೂರ್ಣವಾಗಿ ತುಂಬಿಸುವುದಕ್ಕಾಗಿ ಪ್ರಾರ್ಥಿಸೋಣ.
A9. ವಿಮೋಚನ 33:11 ಒಬ್ಬನು ತನ್ನ ಸ್ನೇಹಿತನೊಡನೆ ಹೇಗೆ ಮಾತನಾಡುವನೋ ಹಾಗೆಯೇ ಯೆಹೋವನು ನಮ್ಮ ಸಂಗಡ ಮುಖಾಮುಖಿಯಾಗಿ ಮಾತನಾಡಿ (ಅರಣ್ಯ 12:8) ನಾವು ಯೆಹೋವನನ್ನು ದೃಷ್ಟಿಸುವುದಕ್ಕಾಗಿ ಪ್ರಾರ್ಥಿಸೋಣ.
A10. ಯಾಜಕ 16:12 ದೇವರು ನಮ್ಮನು ಆತ್ಮಿಕ ಭರಿತವಾದಂತ ಬೆಂಕಿಯ ಕೆಂಡದಿಂದ ತುಂಬಿಸಿ (ಪ್ರಕಟನೆ 5:8) ನಾವು ಪ್ರಾರ್ಥನೆಯ ಜೀವಿತವೆಂಬ ಧೂಪದೊಡನೆ ತನ್ನ ಸನ್ನಿಧಿಗೆ ಬರವುದಕ್ಕಾಗಿ ಪ್ರಾರ್ಥಿಸೋಣ.
A11. ಅರಣ್ಯ 6:5 ನಾವೂ ನಮ್ಮ ಜೀವಿತದ ಎಲ್ಲಾ ದಿನಗಳಲ್ಲಿ ಯೆಹೋವನಿಗೆ ಪರಿಶುದ್ದರಾಗಿ ಹರಕೆ ಮಾಡುವವರಾಗಿ ನಾವು ಪ್ರತಿಷ್ಟಿಸಿಕೊಂಡ ದಿನಗಳು ನಂಬಿಗಸ್ತಿಕೆಯಿಂದ ಪೂರ್ಣಗೊಳಿಸುವುದಕ್ಕಾಗಿ ಪ್ರಾರ್ಥಿಸೋಣ.
A12. ಅರಣ್ಯ 14:24 ನಾವೂ ಸ್ವರ್ಗೀಯ ಕಾನಾನ್ ದೇಶವನ್ನು ತಲುಪಲು ನಮಗೆ ನೂತನ ಸ್ವಭಾವವುಳ್ಳವರಾಗಿ ವಿಧೆಯತ್ವದಲ್ಲಿ ಪೂರ್ಣರಾಗಿ ಜೀವಿಸುವಂತೆ ಪ್ರಾರ್ಥಿಸೋಣ.
A13. ಅರಣ್ಯ 32:11 ಯೆಹೋಶುವ ಮತ್ತು ಕಾಲೇಬರಂತೆ ನಾವು ದೇವರನ್ನು ಪೂರ್ಣ ಮನಸ್ಸಿನಿಂದ ಅನುಸರಿಸುವವರಾಗಿ ಪ್ರಮಾಣ ಪೂರ್ವಕವಾಗಿ ಕೊಟ್ಟ ದೇಶವನ್ನು ನೋಡುವಂತೆ ಪ್ರಾರ್ಥಿಸೋಣ.
A14. ಧರ್ಮೋಪದೇಶ 6:11 ನಮ್ಮ ಮನೆಗಳು ದೇವರು ತುಂಬಿಸುವ ಉತ್ತಮ ವಸ್ತುಗಳಿಂದ ಮತ್ತು (ಯೋಬನು 22:17) ಸಂಪತ್ತಿನಿಂದ ತುಂಬಿ ನಾವು ತೃಪ್ತರಾಗಿ ಜೀವಿಸುವಂತೆ ಪ್ರಾರ್ಥಿಸೋಣ.
A15. ಧರ್ಮೋಪದೇಶ 8:18 ಯೆಹೋವನು ಪಿತೃಗಳಿಗೆ ಪ್ರಮಾಣ ಪೂರ್ವಕವಾಗಿ ಮಾಡಿದ ವಾಗ್ದಾನವನ್ನು ನಮ್ಮಲ್ಲಿ ನೆರವೇರಿಸಲು ನಮಗೆ ಭಾಗ್ಯವನ್ನು ಸಂಪಾದಿಸುವದಕ್ಕೆ ಸಾಮರ್ಥ್ಯವನ್ನು ಕೊಡುವುದಕ್ಕಾಗಿ ಪ್ರಾರ್ಥಿಸೋಣ.
Administrator