Kannada Prayer Points – Serial No. 3
ದೇವರಿಗೆ ಮಹಿಮೆ
ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ
ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36
Prayer Points – (Serial No 3)
C1. 2 ಸಮುವೇಲ 5:10 ನಮ್ಮ ಬದುಕಿನಲ್ಲಿ ನಾವು ಅಭಿವೃದ್ದಿಹೊಂದಲು ದೇವರು ನಮ್ಮ ಸಂಗಡ ಇರುವುದಕ್ಕಾಗಿ ಪ್ರಾರ್ಥಿಸೋಣ.
C2. 2 ಸಮುವೇಲ 7:9 ನಾವು ಹೋದಲೆಲ್ಲಾ ದೇವರು ನಮ್ಮ ಸಂಗಡ ಇದ್ದು ನಮ್ಮ ಎಲ್ಲಾ ಶತ್ರುಗಳನ್ನು ಸಂಹರಿಸುವುದಕ್ಕಾಗಿ ಪ್ರಾರ್ಥಿಸೋಣ.
C3. 2 ಸಮುವೇಲ 22:21 ದೇವರು ನಮ್ಮ ನೀತಿಗೆ ಸರಿಯಾಗಿ, ಕೈಗಳ ಶುದ್ದತ್ವಕ್ಕೆ ತಕ್ಕಂತೆ ನಮಗೆ ಪ್ರತಿಫಲಕೊಡುವುದಕ್ಕಾಗಿ ಪ್ರಾರ್ಥಿಸೋಣ.
C4. 1 ಅರಸುಗಳು 4:29 ಸೊಲೊಮೋನನ ಹಾಗೆ ನಾವು ಶ್ರೇಷ್ಠನಾಗುವುದಕ್ಕಾಗಿ ದೇವರು ನಮಗೆ ಜ್ಞಾನ ವಿವೇಕಗಳನ್ನು ಸಮುದ್ರ ತೀರದ ಉಸುಬಿನಷ್ಟು ಅಪರಿಮಿತ ಮನೋವಿಶಾಲತೆಯನ್ನು ಅನುಗ್ರಹಿಸುವುದಕ್ಕಾಗಿ ಪ್ರಾರ್ಥಿಸೋಣ.
C5. 1 ಅರಸುಗಳು 8:58 ನಾವು ದೇವರ ಮಾರ್ಗದಲ್ಲಿಯೂ ಆತನ ಆಜ್ಞಾನಿಯಮ ವಿಧಿಗಳನ್ನು ಕೈಕೊಂಡು ನಡೆಯಲು ದೇವರು ನಮ್ಮ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿಕೊಳ್ಳುವುದಕ್ಕಾಗಿ ಪ್ರಾರ್ಥಿಸೋಣ.
C6. 1 ಅರಸುಗಳು 17:14 ನಮ್ಮ ಮಡಿಕೆಯಲ್ಲಿರುವ ಹಿಟ್ಟು ತೀರದಂತ್ತೆ, ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗದಂತೆ ದೇವರು ನಮ್ಮ ಅನ್ನಪಾನಗಳನ್ನು ಆಶೀರ್ವದಿಸುವುದಕ್ಕಾಗಿ ಪ್ರಾರ್ಥಿಸೋಣ.
C7. 2 ಅರಸುಗಳು 3:17 ಹೊರಗೆ ಕಾಣುವಂತ ಗುರುತುಗಳು ಇಲ್ಲದಿದ್ದರು ನಾವೆಲ್ಲರೂ ಕುಡಿದು ಸಂತೃಪ್ತರಾಗಲು ನಮ್ಮ ಸಭೆಯಾದ ತಗ್ಗನ್ನು ಪವಿತ್ರಾತ್ಮನೆಂಬ ನೀರಿನಿಂದ ತುಂಬಿಸುವುದಕ್ಕಾಗಿ ಪ್ರಾರ್ಥಿಸೋಣ.
C8. 2 ಅರಸುಗಳು 6:17 ದೈವಿಕವಾದ ಕಾಪಾಡುವಿಕೆ ಹಾಗೂ ಕಾವಲು ನಮಗೆ ಉಂಟಾಗಲು ದೇವರು ನಮಗೆ ಸುತ್ತನ ಅಗ್ನಿಮಯವಾದ ರಥರಥಾಶ್ವಗಳಿಂದ ತುಂಬಿಸುವುದಕ್ಕಾಗಿ ಪ್ರಾರ್ಥಿಸೋಣ.
C9. 1 ಪೂರ್ವಕಾಲ 28:20 ದೇವರು ನಮ್ಮನ್ನು ಕೈಬಿಡದೆ ತೊರೆಯದೆ ನಮ್ಮ ಸಂಗಡ ಇದ್ದು ನಾವು ಮಾಡಬೇಕಾದ ಎಲ್ಲಾ ಕೆಲಸಗಳು ನಮ್ಮಿಂದ ತೀರಿಸುವುದಕ್ಕಾಗಿ ಪ್ರಾರ್ಥಿಸೋಣ.
C10. 1 ಪೂರ್ವಕಾಲ 29:19 ದೇವರು ನಮಗೆ ಯಥಾರ್ಥಮನಸ್ಸನ್ನು ಕೊಟ್ಟು ಆತನ ಅಜ್ಞಾನಿಯಮ ವಿಧಿಗಳನ್ನು ಕೈಕೊಂಡು ನಮ್ಮ ಕ್ರಿಯೆಗಳನ್ನು ತೀರಿಸುವುದಕ್ಕಾಗಿ ಪ್ರಾರ್ಥಿಸೋಣ.
C11. 1 ಪೂರ್ವಕಾಲ 29:28 ನಮ್ಮ ಬದುಕಿನಲ್ಲಿ ನಾವು ದೀರ್ಘಾಯುಷ್ಯನಾಗಿ ಐಶ್ವರ್ಯ ಮಾನ ಇವುಗಳನ್ನು ಅನುಭವಿಸಿ ತುಂಬಾ ವೃದ್ದನಾಗಿ ಮರಣಹೊಂದುವುದಕ್ಕಾಗಿ ಪ್ರಾರ್ಥಿಸೋಣ.
C12. 2 ಪೂರ್ವಕಾಲ 5:13 ನಾವು ಸ್ವರವೆತ್ತಿ ಯೆಹೋವನನ್ನು ಕೀರ್ತಿಸುವಾಗ ದೇವರ ಆಲಯವಾದ ನಮ್ಮ ಶರೀರವೂ ದೇವರ ಸಾನಿದ್ಯದಿಂದ ತುಂಬುವುದಕ್ಕಾಗಿ ಪ್ರಾರ್ಥಿಸೋಣ.
C13. 2 ಪೂರ್ವಕಾಲ 6:4 ನಮ್ಮ ದೇವರಾದ ಯೆಹೋವನು ಸ್ತುತಿಗೆ ಯೋಗ್ಯನಾದರಿಂದ ಆತನ ಬಾಯಿ ನುಡಿದದ್ದನ್ನು ಆತನ ಹಸ್ತವು ನೆರವೇರಿಸುವುದಕ್ಕಾಗಿ ಪ್ರಾರ್ಥಿಸೋಣ.
C14. 2 ಪೂರ್ವಕಾಲ 7:1 ದೇವರು ನಮ್ಮ ಪ್ರಾರ್ಥನೆಯನ್ನು ಕೇಳಿ ನಮ್ಮ ಬದುಕೆಂಬ ಯಜ್ಞವನ್ನು ಮೆಚ್ಚಿ ದೇವರ ತೇಜಸ್ಸಿನಿಂದ ನಮ್ಮನ್ನು ತುಂಬಿಸುವುದಕ್ಕಾಗಿ ಪ್ರಾರ್ಥಿಸೋಣ.
C15. 2 ಪೂರ್ವಕಾಲ 7:11 ನಾವು ದೇವರ ಆಲಯವಾಗುವಂತೆ ನಮ್ಮಲ್ಲಿರುವ ಇಚ್ಚೆಗಳನೆಲ್ಲಾ ದೇವರು ಶುಭವಾಗಿ ಕೊನೆಗಾಣಿಸುವುದಕ್ಕಾಗಿ ಪ್ರಾರ್ಥಿಸೋಣ.
Administrator