Kannada Prayer Points – Serial No. 13

Kannada Prayer Points – Serial No. 13
: :

ದೇವರಿಗೆ ಮಹಿಮೆ

ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ

ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36

Prayer Points – (Serial No 13)

M1. ಎಫೆಸ 4:13 ದೇವರ ಸೇವಕರಿಂದ ನಾವೆಲ್ಲರೂ ಪ್ರವೀಣತೆಗೆ ಬಂದವರಾಗಿ ಕ್ರಿಸ್ತನ ಪರಿಪೂರ್ಣತೆಯೆಂಬ ಪ್ರಮಾಣವನ್ನು ಮುಟ್ಟುವವರಾಗುವುದಕ್ಕಾಗಿ ಪ್ರಾರ್ಥಿಸೋಣ.

M2. ಎಫೆಸ 5:18-20 ನಾವು ಪವಿತ್ರಾತ್ಮ ಭರಿತರಾಗಿದ್ದು ಕೀರ್ತನೆಗಳಿಂದಲೂ ಆತ್ಮಸಂಬಂಧವಾದ ಪದಗಳಿಂದಲೂ ತಂದೆಯಾದ ದೇವರಿಗೆ ಯಾವಾಗಲು ಎಲ್ಲಾ ಕಾರ್ಯಗಳಿಗೋಸ್ಕರವು ಸ್ತೋತ್ರ ಮಾಡುವವರಾಗುವುದಕ್ಕಾಗಿ ಪ್ರಾರ್ಥಿಸೋಣ.

M3. ಎಫೆಸ 6:18 ಸಕಲ ವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಎಲ್ಲಾ ಸಮಯಗಳಲ್ಲಿ ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥಿಸಿ ಪೂರ್ಣ ಸ್ಥಿರಚಿತ್ತರಾಗಿದ್ದು ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರುವುದಕ್ಕಾಗಿ ಪ್ರಾರ್ಥಿಸೋಣ.

M4. ಫಿಲಿಪ್ಪಿ 1:4 ಒಳ್ಳೇ ಕೆಲಸವನ್ನು ನಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ನಡಿಸಿಕೊಂಡು ಯೇಸು ಕ್ರಿಸ್ತನು ಬರುವ ದಿನದೊಳಗಾಗಿ ನಮ್ಮಲ್ಲಿ ಸಿದ್ಧಿಗೆ ತರುವುದಕ್ಕಾಗಿ ಪ್ರಾರ್ಥಿಸೋಣ.

M5. ಫಿಲಿಪ್ಪಿ 1:10,11 ಕ್ರಿಸ್ತನು ಬರುವ ದಿನದಲ್ಲಿ ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಯೇಸು ಕ್ರಿಸ್ತನ ಮೂಲಕವಾಗಿರುವ ಸುನೀತಿಯೆಂಬ ಫಲದಿಂದ ತುಂಬಿದವರಾಗುವುದಕ್ಕಾಗಿ ಪ್ರಾರ್ಥಿಸೋಣ.

M6. ಫಿಲಿಪ್ಪಿ 1:20 ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಬದುಕಿದರು ಸತ್ತರೂ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗುವುದಕ್ಕೆ ತುಂಬಾ ಧೈರ್ಯವುಳ್ಳವರಾಗುವುದಕ್ಕಾಗಿ ಪ್ರಾರ್ಥಿಸೋಣ.

M7. ಫಿಲಿಪ್ಪಿ 13:14,15 ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಪ್ರಕಟಿಸಬೇಕೆಂಬದಾಗಿ ಕರ್ತನಾದ ಯೇಸುವಿನಿಂದ ನಾವು ಹೊಂದಿರುವ ಸೇವೆಯೆಂಬ ಓಟವನ್ನು ಕಡೆಗಾಣಿಸುವುದಕ್ಕಾಗಿ ಪ್ರಾರ್ಥಿಸೋಣ.

M8. ಫಿಲಿಪ್ಪಿ 4:19 ನಮ್ಮ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವುದಕ್ಕಾಗಿ ಪ್ರಾರ್ಥಿಸೋಣ.

M9. ಕೊಲೊಸ್ಸೆ1:10 ನಾವು ಎಲ್ಲಾ ವಿಧದಲ್ಲಿ ದೇವರಿಗೆ ಯೋಗ್ಯರಾಗಿ ನಡೆದು ಸಂತೋಷಪಡಿಸಲು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬುವುದಕ್ಕಾಗಿ ಪ್ರಾರ್ಥಿಸೋಣ.

M10. ಕೊಲೊಸ್ಸೆ1:11 ಆನಂದಪೂರ್ವಕವಾದ ತಾಳ್ಮೆಯನ್ನು ಧೀರ್ಘಶಾಂತಿಯನ್ನೂ ತೋರಿಸುವುದಕ್ಕೋಸ್ಕರ ಆತನ ಮಹಿಮಾಶಕ್ತಿಯ ಪ್ರಕಾರ ಪರಿಪೂರ್ಣಬಲಹೊಂದಿ ಬಲಿಷ್ಠರಾಗುವುದಕ್ಕಾಗಿ ಪ್ರಾರ್ಥಿಸೋಣ.

M11. ಕೊಲೊಸ್ಸೆ 1:12 ಬೆಳಕಿನ ರಾಜ್ಯದೊಳಗೆ ದೇವಜನರ ಬಾಧ್ಯತೆಯಲ್ಲಿ ಪಾಲುಗಾರರಾಗುವದಕ್ಕೆ ಲೋಕದ ಬದುಕಿನಲ್ಲಿ ದೇವರು ನಮ್ಮನ್ನು ಯೋಗ್ಯರನ್ನಾಗಿ ಮಾಡುವುದಕ್ಕಾಗಿ ಪ್ರಾರ್ಥಿಸೋಣ.

M12. ಕೊಲೊಸ್ಸೆ 1:28 ದೇವರು ನಮಗೆ ಯೇಸುವಿನ ಕುರಿತಾದ ಉಪದೇಶವನ್ನು ಪೂರ್ಣಜ್ಞಾನವನ್ನು ಕೊಟ್ಟು ನಾವು ಕ್ರಿಸ್ತನಲ್ಲಿ ಪ್ರವೀಣರನ್ನಾಗಿ ನಿಲ್ಲಲ್ಲು ಸಾಧ್ಯವಾಗುವುದಕ್ಕಾಗಿ ಪ್ರಾರ್ಥಿಸೋಣ.

M13. ಕೊಲೊಸ್ಸೆ 2:2 ನಾವು ಪ್ರೀತಿಯಿಂದ ಹೊಂದಿಕೆಯಾಗಿದ್ದು ದೇವರು ತಿಳಿಸಿರುವ ಮರ್ಮವನ್ನು ಜ್ಞಾನವಿದ್ಯಾಸಂಬಂಧವಾದ ನಿಕ್ಷೇಪಗಳನ್ನು ಹೊಂದಿಕೊಳ್ಳುವವರಾಗುವುದಕ್ಕಾಗಿ ಪ್ರಾರ್ಥಿಸೋಣ.

M14. ಕೊಲೊಸ್ಸೆ 2:3 ಕ್ರಿಸ್ತನಲ್ಲಿ ಅಡಗಿಸಿಕೊಂಡಿರುವ ಜ್ಞಾನವಿದ್ಯಾಸಂಬಂಧವಾದ ನಿಕ್ಷೇಪಗಳನ್ನೆಲ್ಲಾ ದೇವರು ನಮಗೆ ಕೊಡುವುದಕ್ಕಾಗಿ ಪ್ರಾರ್ಥಿಸೋಣ.

M15. ಕೊಲೊಸ್ಸೆ 2:9,10 ದೇವರ ಸರ್ವಸಂಪೂರ್ಣತೆಯು ಆವರಿಸಿ ವಾಸಮಾಡುವ ದೊರೆತನಗಳಿಗೂ ಅಧಿಕಾರಿಗಳಿಗೂ ಶಿರಸ್ಸಾದ ಕ್ರಿಸ್ತನಲ್ಲಿ ನಾವು ಪರಿಪೂರ್ಣತೆಯನ್ನು ಹೊಂದುವುದಕ್ಕಾಗಿ ಪ್ರಾರ್ಥಿಸೋಣ.