Kannada Prayer Points – Serial No. 14

Kannada Prayer Points – Serial No. 14
: :

ದೇವರಿಗೆ ಮಹಿಮೆ

ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ

ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36

Prayer Points – (Serial No 14)

N1. ಕೊಲೊಸ್ಸೆ 3:13,14 ನಮ್ಮ ಕರ್ತನು ನಮ್ಮನ್ನು ಕ್ಷಮಿಸಿದಂತೆಯೇ ನಾವು ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿ ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾದ ಪ್ರೀತಿಯನ್ನು ಧರಿಸಿಕೊಳ್ಳುವವರಾಗುವುದಕ್ಕಾಗಿ ಪ್ರಾರ್ಥಿಸೋಣ.

N2. ಕೊಲೊಸ್ಸೆ 4:12 ಪ್ರಾರ್ಥನೆಯಲ್ಲಿ ಹೋರಾಡುವುದರಿಂದ ನಾವು ಪ್ರವೀಣರಾಗಿಯೂ ದೇವರ ಚಿತ್ತವನ್ನು ಕುರಿತು ಪೂರ್ಣ ನಿಶ್ಚಯವುಳ್ಳವರಾಗಿಯೂ ನಿಲ್ಲುವುದಕ್ಕಾಗಿ ಪ್ರಾರ್ಥಿಸೋಣ.

N3. 1 ಥೆಸಲೋನಿಕ 5:23 ಶಾಂತಿದಾಯಕನಾದ ದೇವರು (1 ಯೋಹಾನ 1:9) ನಾವು ಒಪ್ಪಿಕೊಂಡು ಅರಿಕೆಮಾಡುವ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವುದಕ್ಕಾಗಿ ಪ್ರಾರ್ಥಿಸೋಣ.

N4. 1 ಥೆಸಲೋನಿಕ 5:23 ನಮ್ಮ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಮ್ಮ ಆತ್ಮಪ್ರಾಣಶರೀರಗಳು ದೋಷವಿಲ್ಲದೆ ಸಂಪೂರ್ಣವಾಗಿ ಕಾಣಿಸುವಂತೆ ಕಾಪಾಡಲ್ಪಡುವುದಕ್ಕಾಗಿ ಪ್ರಾರ್ಥಿಸೋಣ.

N5. 1 ಥೆಸಲೋನಿಕ 5:24 ನಮ್ಮನ್ನು ಕರೆಯುವಂತ ನಂಬಿಗಸ್ತನಾದ ದೇವರು ತನ್ನ ಕರೆಯುವಿಕೆಯಿಂದ ಇರುವ ಉದ್ದೇಶವನ್ನು ನಮ್ಮಲ್ಲಿ ನಂಬಿಗಸ್ತಿಕೆಯಿಂದ ಸಾಧಿಸುವುದಕ್ಕಾಗಿ ಪ್ರಾರ್ಥಿಸೋಣ.

N6. 2 ಥೆಸಲೋನಿಕ 1:12 ದೇವರು ಕರೆದದ್ದಕ್ಕೆ ತಾನೇ ನಾವು ಯೋಗ್ಯರೆಂದು ಎಣಿಸಿ ಸತ್ಕ್ರಿಯೆಗಳಲ್ಲಿ ಸಂತೋಷಿಸುವ ನಮ್ಮ ಸಕಲ ಆಲೋಚನೆಯನ್ನೂ ನಂಬಿಕೆಯ ಫಲವಾದ ನಮ್ಮ ಕೆಲಸವನ್ನು ಶಕ್ತಿಪೂರ್ವಕವಾಗಿ ಸಿದ್ಧಿಗೆ ತರುವುದಕ್ಕಾಗಿ ಪ್ರಾರ್ಥಿಸೋಣ.

N7. 1 ತಿಮೊಥೆಯ 2:11 - ನಾವು ದೇವರ ಸನ್ನಿಧಿಯಲ್ಲಿ ಮೌನವಾಗಿದ್ದು (ಮತ್ತಾಯ 11:29) ಯೇಸುವಿನ ನೊಗವನ್ನು ತೆಗೆದುಕೊಂಡು) ಪೂರ್ಣವಿಧೇಯರಾಗಿ ಯೇಸುವಿನಿಂದ ಕಲಿಯಲು ಸಾಧ್ಯವಾಗುವುದಕ್ಕಾಗಿ ಪ್ರಾರ್ಥಿಸೋಣ.

N8. 1 ತಿಮೊಥೆಯ 3:4 ಕ್ರೈಸ್ತ ಬದುಕಿನಲ್ಲಿ ನಮ್ಮನ್ನೇ ಚೆನ್ನಾಗಿ ಆಳುವವರಾಗಿ ನಾವು ಪೂರ್ಣಗೌರವದಿಂದ ವಿಧೇಯತ್ವದಲ್ಲಿ ಬದುಕುವವರಾಗುವುದಕ್ಕಾಗಿ ಪ್ರಾರ್ಥಿಸೋಣ.

N9. 1 ತಿಮೊಥೆಯ 5:2 (1 ಯೋಹಾನನು 3:3) ನಮ್ಮ ಕರ್ತನು ಶುದ್ದನಾಗಿರುವಂತೆಯೇ ನಾವು ನಮ್ಮ ಬದುಕಿನಲ್ಲಿ ಶುದ್ದರಾಗಿ ಬದುಕುವುದಕ್ಕಾಗಿ ಪ್ರಾರ್ಥಿಸೋಣ.

N10.  2 ತಿಮೊಥೆಯ 3:16 ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರದಿಂದ ದೇವರ ಮನುಷ್ಯರಾದ ನಾವು ಪ್ರವೀಣರಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ದರಾಗುವುದಕ್ಕಾಗಿ ಪ್ರಾರ್ಥಿಸೋಣ.

N11. 2 ತಿಮೊಥೆಯ 4:7 ನೀತಿವಂತರಿಗೆ ದೊರಕುವ ಜಯಮಾಲೆಯನ್ನು ಹೊಂದುವುದಕ್ಕಾಗಿ ನಮ್ಮ ಬದುಕಿನಲ್ಲಿ ಶ್ರೇಷ್ಠ ಹೋರಾಟವನ್ನು ಮಾಡಿ ಓಟವನ್ನು ಕಡೆಗಾಣಿಸಿ ಕ್ರಿಸ್ತನಂಬಿಕೆಯನ್ನು ಕಾಪಾಡುವುದಕ್ಕಾಗಿ ಪ್ರಾರ್ಥಿಸೋಣ.

N12. ತೀತನಿಗೆ 3:2 ಯಾರನ್ನೂ ದೂಷಿಸದೆ ಕುತರ್ಕಮಾಡದೆ ಸಾತ್ವಿಕರಾಗಿದ್ದು ಎಲ್ಲಾ ಮನುಷ್ಯರಿಗೆ ಪೂರ್ಣ ಸಾಧುಗುಣವನ್ನು ತೋರಿಸುವುದಕ್ಕಾಗಿ ಪ್ರಾರ್ಥಿಸೋಣ.

N13. ಇಬ್ರಿಯರಿಗೆ 2:10; 5:8 ನಮ್ಮ ಯೇಸುವಿನ ಹಾಗೆ ನಾವು ಅನುಭವಿಸುವ ಬಾಧೆಗಳಿಂದ ವಿಧೇಯತೆಯನ್ನು ಕಲಿತು ಸಿದ್ಧಿಗೆ ತಂದು ಪ್ರಭಾವಕ್ಕೆ ಸೇರಿಸಲ್ಪಡುವುದಕ್ಕಾಗಿ ಪ್ರಾರ್ಥಿಸೋಣ.

N14. ಇಬ್ರಿಯರಿಗೆ 6:11 ನಮ್ಮಲ್ಲಿ ಪ್ರತಿಯೊಬ್ಬರು ಉಪಚಾರ ಮಾಡುವುದರಲ್ಲಿ ನಮ್ಮ ನಿರೀಕ್ಷೆ ದೃಢಮಾಡಿಕೊಂಡು ಕಡೆ ತನಕ ಹಿಡಿಯುವುದರಲ್ಲಿ ಆಸಕ್ತಿಯನ್ನು ಹೊಂದುವವರಾಗುವುದಕ್ಕಾಗಿ ಪ್ರಾರ್ಥಿಸೋಣ.

N15. ಇಬ್ರಿಯರಿಗೆ 7:25 ನಮ್ಮ ಯೇಸು ಯಾವಾಗಲೂ ಬದುಕುವವನಾಗಿದ್ದು ನಮಗೋಸ್ಕರ ವಿಜ್ಞಾಪನೆಮಾಡುವುದರಿಂದ ನಾವು ಸಂಪೂರ್ಣ ರಕ್ಷಣೆ ಹೊಂದುವುದಕ್ಕೆ ಶಕ್ತರಾಗುವುದಕ್ಕಾಗಿ ಪ್ರಾರ್ಥಿಸೋಣ.