Kannada Prayer Points – Serial No. 12
ದೇವರಿಗೆ ಮಹಿಮೆ
ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ
ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36
Prayer Points – (Serial No 12)
L1. ರೋಮಾಪುರ 4:20,21 ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅಪನಂಬಿಕೆಯಿಂದ ಚಂಚಲಚಿತ್ತನಾಗದೆ ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ಸಮಸ್ಥನೆಂದು ಪೂರಾ ಭರವಸವಿಟ್ಟು ದೃಢನಂಬಿಕೆಯುಳ್ಳವರಾಗುವುದಕ್ಕಾಗಿ ಪ್ರಾರ್ಥಿಸೋಣ.
L2. ರೋಮಾಪುರ 5:5 ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿರಸವು ನಮ್ಮ ಹೃದಯದಲ್ಲಿ ಧಾರಾಳವಾಗಿ ಸುರಿಯುವುದಕ್ಕೆ ಪ್ರಾರ್ಥಿಸೋಣ.
L3. ರೋಮಾಪುರ 8:37 ನಮ್ಮ ಬದುಕಿನಲ್ಲಿ ಉಂಟಾಗುವ ಎಲ್ಲಾ ಪ್ರತಿಕೂಲದಲ್ಲಿ ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ಪೂರ್ಣ ಜಯಶಾಲಿಯಾಗುವುದಕ್ಕಾಗಿ ಪ್ರಾರ್ಥಿಸೋಣ.
L4. ರೋಮಾಪುರ 12:2 ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿದ್ದು ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ರೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳಿದುಕೊಳ್ಳುವುದಕ್ಕಾಗಿ ಪ್ರಾರ್ಥಿಸೋಣ.
L5. ರೋಮಾಪುರ 15:14 ನಾವೆಲ್ಲರೂ ಒಳ್ಳೇತನದಿಂದ ಭರಿತರಾಗಿಯೂ ಸಕಲ ಜ್ಞಾನದಿಂದ ತುಂಬಿದವರಾಗಿಯೂ ಒಬ್ಬರಿಗೊಬ್ಬರು ಬುದ್ಧಿ ಹೇಳುವುದಕ್ಕೆ ಶಕ್ತರಾಗುವುದಕ್ಕಾಗಿ ಪ್ರಾರ್ಥಿಸೋಣ.
L6. 1 ಕೊರಿಂಥ 2:6,7 ನಾವು ಪ್ರವೀಣರಾಗಿದ್ದು ನಮ್ಮ ಮಹಿಮೆಗಾಗಿ ಲೋಕೋತ್ಪತಿಗಿಂತ ಮೊದಲೇ ನೇಮಿಸಿ ಇದುವರೆಗೆ ಮರೆಮಾಡಿದ ದೇವರ ಜ್ಞಾನವನ್ನು ನಮ್ಮೊಂದಿಗೆ ತಿಳಿಸುವುದಕ್ಕಾಗಿ ಪ್ರಾರ್ಥಿಸೋಣ.
L7. 1 ಕೊರಿಂಥ 14:26 ನಮಗೆ ಭಕ್ತಿವೃದ್ಧಿ ಉಂಟಾಗಲು ದೇವರು ಪವಿತ್ರಾತ್ಮನಿಂದ ನಮ್ಮ ಕೂಟಗಳಲ್ಲಿ ಸಕಲ ಕೃಪೆಯ ವರಗಳಿಂದ ನಮ್ಮನ್ನು ತುಂಬಿಸುವುದಕ್ಕಾಗಿ ಪ್ರಾರ್ಥಿಸೋಣ.
L8. 2 ಕೊರಿಂಥ 3:5,6 ನಮ್ಮಿಂದಲೇ ಏನಾದರು ಉಂಟಾಯಿತೆಂದು ತೀರ್ಮಾನಿಸಿಕೊಳ್ಳುವುದಕ್ಕೆ ನಮ್ಮಷ್ಟಕ್ಕೆ ನಾವೇ ಸಮರ್ಥರಲ್ಲದರಿಂದ ದೇವರು ತನ್ನ ದಾನವಾದ ಸಾಮರ್ಥ್ಯವನ್ನು ಕೊಟ್ಟು ನಮ್ಮನ್ನು ಅರ್ಹರಾಗಿ ಮಾಡುವುದಕ್ಕಾಗಿ ಪ್ರಾರ್ಥಿಸೋಣ.
L9. 2 ಕೊರಿಂಥ 7:1 ದೇವರ ವಾಗ್ದಾನಗಳು ನಮಗಿರುವುದರಿಂದ ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವುದಕ್ಕಾಗಿ ಪ್ರಾರ್ಥಿಸೋಣ.
L10. 2 ಕೊರಿಂಥ 7:4 ನಾವು ಇತರರ ಕುರಿತು ಹೊಗಳುವಂತೆ ನಮಗೆ ಅವರೊಂದಿಗೆ ಬಹಳ ಭರವಸ ಇದ್ದು ನಾವು ಸಂತೋಷದಿಂದ ತುಂಬಿದವರಾಗಿ ಆದರಣೆಯಲ್ಲಿ ತುಂಬುವುದಕ್ಕಾಗಿ ಪ್ರಾರ್ಥಿಸೋಣ.
L11. 2 ಕೊರಿಂಥ 9:8 ಸಕಲವಿಧವಾದ ದಾನಗಳನ್ನು ನಮಗೆ ಧಾರಾಳವಾಗಿ ಅನುಗ್ರಹಿಸಿ ನಮ್ಮ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗುವುದಕ್ಕೆ ಪ್ರಾರ್ಥಿಸೋಣ.
L12. 2 ಕೊರಿಂಥ 12:9 ದೇವರ ಕೃಪೆಯಿಂದ ತನ್ನ ಬಲವು ನಮ್ಮ ಬಲಹೀನತೆಯಲ್ಲಿ ಪೂರ್ಣಸಾಧಕವಾಗಿ ಕ್ರಿಸ್ತನ ಬಲವು ನಮ್ಮಲ್ಲಿ ನೆಲೆಸಿಕೊಳ್ಳುವುದಕ್ಕಾಗಿ ಪ್ರಾರ್ಥಿಸೋಣ.
L13. 2 ಕೊರಿಂಥ 12:12 ಅಪೋಸ್ತಲನಿಗೆ ಇರತಕ್ಕ ಲಕ್ಷಣಗಳು ಸೂಚಕಕಾರ್ಯಗಳನ್ನೂ ಅದ್ಬುತಕಾರ್ಯಗಳನ್ನು ಮಹತ್ಕಾರ್ಯಗಳನ್ನೂ ನಮ್ಮಲ್ಲಿ ಪ್ರಕಟಿಸಲು ನಾವು ಸ್ಥಿರಚಿತ್ತದಿಂದ ತಾಳಿಕೊಳ್ಳುವವರಾಗುವುದಕ್ಕಾಗಿ ಪ್ರಾರ್ಥಿಸೋಣ.
L14. ಎಫೆಸ 1:3 ನಾವು ಆತ್ಮೀಕರಾಗಲು ಪರಲೋಕದಲ್ಲಿನ ಸಕಲ ಆತ್ಮೀಯವರಗಳಿಂದ ದೇವರು ನಮ್ಮನ್ನು ಕ್ರಿಸ್ತ ಯೇಸುವಲ್ಲಿ ಅನುಗ್ರಹಿಸುವುದಕ್ಕಾಗಿ ಪ್ರಾರ್ಥಿಸೋಣ.
L15. ಎಫೆಸ 4:1,2 ನಾವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಯೋಗ್ಯರಾಗಿ ನಡೆದುಕೊಳ್ಳಲು ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ ಪೂರ್ಣ ವಿನಯದಿಂದ ಸಹಿಸಿಕೊಳ್ಳುವವರಾಗುವುದಕ್ಕಾಗಿ ಪ್ರಾರ್ಥಿಸೋಣ.
Administrator