Kannada Prayer Points – Serial No. 15

Kannada Prayer Points – Serial No. 15
: :

ದೇವರಿಗೆ ಮಹಿಮೆ

ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ

ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36

Prayer Points – (Serial No 15)

O1. ಇಬ್ರಿಯರಿಗೆ 9:9 ನಮ್ಮ ಮನಸಾಕ್ಷಿಗೆ ಸಮರ್ಪಣೆಯಾಗುವ ಕಾಣಿಕೆಗಳೂ ಯಜ್ಞಗಳೊಂದಿಗೆ ನಮ್ಮನ್ನೇ ಒಪ್ಪಿಸಿ ದೇವರನ್ನು ಆರಾಧಿಸುವುದಕ್ಕಾಗಿ ಪ್ರಾರ್ಥಿಸೋಣ.

O2. ಇಬ್ರಿಯರಿಗೆ 12:2 ನಾವು ನಂಬಿಕೆಯಲ್ಲಿ ಸಂಪನ್ನರಾಗಲು ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸು ನಮ್ಮ ನಂಬಿಕೆಯನ್ನು ಪೂರೈಸುವುದಕ್ಕಾಗಿ ಪ್ರಾರ್ಥಿಸೋಣ.

O3. ಇಬ್ರಿಯರಿಗೆ 13:21 ನಮ್ಮನ್ನು ದೇವರ ಚಿತ್ತವನ್ನು ನೆರವೇರಿಸಲು ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಯನ್ನು ಅನುಗ್ರಹಿಸಿ ಯೇಸು ಕ್ರಿಸ್ತನ ಮೂಲಕ ತನಗೆ ಸಮರ್ಪಕವಾದದ್ದನ್ನು ನಮ್ಮಲ್ಲಿ ನಡಿಸುವುದಕ್ಕಾಗಿ ಪ್ರಾರ್ಥಿಸೋಣ.

O4. ಯಾಕೋಬ 1:4 ನಮ್ಮ ಬದುಕಿನಲ್ಲಿ ತಾಳ್ಮೆಗೆ ಸಿದ್ಧಿ ಬಂದು ನಾವೆಲ್ಲರೂ ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗುವುದಕ್ಕಾಗಿ ಪ್ರಾರ್ಥಿಸೋಣ.

O5. ಯಾಕೋಬ 1:17 ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ನಮಗೆ ದೊರಕುವುದಕ್ಕಾಗಿ ಪ್ರಾರ್ಥಿಸೋಣ.

O6. ಯಾಕೋಬ 2:22 ಅಬ್ರಹಾಮನ ಹಾಗೆ ನಮ್ಮ ನಂಬಿಕೆಯು ಕ್ರಿಯೆಗಳೊಂದಿಗೆ ಪ್ರವರ್ತಿಸಿ ಕ್ರಿಯೆಗಳಿಂದಲೇ ನಮ್ಮ ನಂಬಿಕೆಯು ಪೂರ್ಣವಾಗುವುದಕ್ಕಾಗಿ ಪ್ರಾರ್ಥಿಸೋಣ.

O7. ಯಾಕೋಬ 3:17 ಮೇಲಣಿಂದ ಬರುವ ಜ್ಞಾನದಿಂದ ನಾವು ಪರಿಶುದ್ಧರಾಗಿ ಸಮಾಧಾನವು ವಿನಯವು ಸಂತೋಷವೂ ಉಳ್ಳವರಾಗಿ ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿದವರಾಗುವುದಕ್ಕಾಗಿ ಪ್ರಾರ್ಥಿಸೋಣ.

O8. 1 ಪೇತ್ರನು 1:13 ನಾವು ಮನಸ್ಸಿನ ನಡುವನ್ನು ಕಟ್ಟಿಕೊಂಡು ಸ್ವಸ್ತಚಿತ್ತರಾಗಿದ್ದು ನಮ್ಮ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಮಗೆ ದೊರಕುವ ಭಾಗ್ಯದ ಮೇಲೆ ಸಂಪೂರ್ಣ ನಿರೀಕ್ಷೆಯುಳ್ಳವರಾಗುವುದಕ್ಕಾಗಿ ಪ್ರಾರ್ಥಿಸೋಣ.

O9. 1 ಪೇತ್ರನು 2:18 ನಾವು ಎಲ್ಲಾ ಮನುಷ್ಯರಿಗೂ ಪ್ರತ್ಯೇಕವಾಗಿ ವಕ್ರಬುದ್ಧಿಯುಳ್ಳವರಿಗೂ ಅಧೀನರಾಗಲು ಪೂರ್ಣಭಯದಿಂದ ಜೀವಿಸುವವರು ಆಗುವುದಕ್ಕಾಗಿ ಪ್ರಾರ್ಥಿಸೋಣ.

O10. 1 ಪೇತ್ರನು 4:11 ಎಲ್ಲದರಲ್ಲಿಯೂ ಯೇಸು ಕ್ರಿಸ್ತನ ಮೂಲಕ ದೇವರಿಗೆ ಮಹಿಮೆಯುಂಟ್ಟಾಗುವಂತೆ ಎಲ್ಲಾ ಸೇವಕರಿಗೂ ತಮ್ಮ ಸೇವೆಯನ್ನು ಮಾಡಲು ದೇವರು ಶಕ್ತಿಯನ್ನು ಕೊಡುವುದಕ್ಕಾಗಿ ಪ್ರಾರ್ಥಿಸೋಣ.

O11. 2 ಪೇತ್ರನು 1:3 ನಮ್ಮನ್ನು ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯ ಶಕ್ತಿಯು ನಮಗೆ ಪರಿಜ್ಞಾನವನ್ನು ಕೊಟ್ಟದರಲ್ಲಿ ಜೀವಕ್ಕೂ ಭಕ್ತಿಗೂ ಬೇಕಾದದೆಲ್ಲವನ್ನು ನಮಗೆ ದಾನವಾಗಿ ಕೊಡುವುದಕ್ಕಾಗಿ ಪ್ರಾರ್ಥಿಸೋಣ.

O12. 1 ಯೋಹಾನನು 2:5 ನಾವು ದೇವರಲ್ಲಿದ್ದೇವೆಂದು ತಿಳಿಯಲು ದೇವರ ವಾಕ್ಯವನ್ನು ಕೈಕೊಳ್ಳುವವರಾಗಿದ್ದು ನಿಜವಾದ ದೇವರ ಮೇಲಣ ಪ್ರೀತಿಯು ನಮ್ಮಲ್ಲಿ ಪರಿಪೂರ್ಣವಾಗುವುದಕ್ಕಾಗಿ ಪ್ರಾರ್ಥಿಸೋಣ.

O13. 1 ಯೋಹಾನನು 4:12 ನಾವೂ ಎಂದಿಗೂ ನೋಡದಂತೆ ದೇವರು ನಮ್ಮಲ್ಲಿ ನೆಲೆಗೊಳ್ಳಲು ನಾವು ಒಬ್ಬರನ್ನೊಬ್ಬರು ಪ್ರೀತಿಸುವವರಾಗಿದ್ದು ದೇವರ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುವುದಕ್ಕಾಗಿ ಪ್ರಾರ್ಥಿಸೋಣ.

O14. ಯೂದನು 1:24 ಎಡಬೀಳದಂತೆ ನಮ್ಮನ್ನು ಕಾಪಾಡುವ ಶಕ್ತನಾದ ದೇವರು ತನ್ನ ಪ್ರಭಾವದ ಸಮಕ್ಷಮದಲ್ಲಿ ನಮ್ಮನ್ನು ನಿರ್ದೋಷಿಗಳನ್ನಾಗಿ ಹರ್ಷದೊಡನೆ ನಿಲ್ಲಿಸುವುದಕ್ಕಾಗಿ ಪ್ರಾರ್ಥಿಸೋಣ.

O15. ಪ್ರಕಟನೆ 3:2 ನಾವು ಎಚ್ಚರವಾಗಿದ್ದು ನಮ್ಮಲ್ಲಿ ಸಾಯುವ ಹಾಗಿದ್ದ ಉಳಿದವುಗಳನ್ನು ದೃಢಪಡಿಸಿ ನಮ್ಮ ಕೃತ್ಯಗಳು ದೇವರ ಸನ್ನಿಧಿಯಲ್ಲಿ ಸಂಪೂರ್ಣವಾಗುವುದಕ್ಕಾಗಿ ಪ್ರಾರ್ಥಿಸೋಣ.