Kannada Prayer Points – Serial No. 10
ದೇವರಿಗೆ ಮಹಿಮೆ
ಪ್ರಾರ್ಥನೆಗೂ ಹಾಗೂ ಸ್ತ್ರೋತ್ರಗಳಿಗೆ
ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು. ಲೂಕ 21:36
Prayer Points – (Serial No 10)
J1. ಮತ್ತಾಯ 5:48 ನಮ್ಮ ಪರಲೋಕದ ತಂದೆಯು ಯಾವ ದೋಷವೂ ಇಲ್ಲದವನಾಗಿರುವಂತೆ ನೀವೂ ದೋಷವಿಲ್ಲದವರಾಗಿ ಪರಲೋಕದ ತಂದೆಗೆ ಕುಮಾರರಾಗುವಂತೆ ಪ್ರಾರ್ಥಿಸೋಣ.
J2. ಮತ್ತಾಯ 5:16 ಮನುಷ್ಯರು ನಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಸಮಸ್ತ ಜನಾಂಗಗಳು ದೇವರ ಪ್ರಭಾವವುಳ್ಳ ನಾಮವನ್ನು ಮಹಿಮೆ ಪಡಿಸಿ ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬುವುದಕ್ಕಾಗಿ ಪ್ರಾರ್ಥಿಸೋಣ.
J3. ಮತ್ತಾಯ 19:21 ನಾವು ಈ ಭೂಮಿಯಲ್ಲಿ ಸ್ವಂತವಾಗಿ ಏನು ಇಲ್ಲದವರಾಗಿ ಅನ್ಯರು ಪರದೇಶಿಗಳಾಗಿ ಯೇಸುವನ್ನು ಹಿಂಬಾಲಿಸಿ ಎಲ್ಲರು ಸಂಪೂರ್ಣರಾಗಿ ನಿತ್ಯಜೀವವನ್ನು ಹೊಂದುವುದಕ್ಕಾಗಿ ಪ್ರಾರ್ಥಿಸೋಣ.
J4. ಮತ್ತಾಯ 28:20 ಯೇಸು ತಾನು ಆಜ್ಞಾಪಿಸಿದಂತೆ ಯುಗದ ಸಮಾಪ್ತಿಯವರೆಗೆ ಎಲ್ಲಾ ದಿವಸ ನಮ್ಮ ಸಂಗಡ ಇರುವುದರಿಂದ ನಾವು ಅನೇಕರನ್ನು ಶಿಷ್ಯರನ್ನಾಗಿ ಮಾರ್ಪಡಿಸುವುದಕ್ಕಾಗಿ ಪ್ರಾರ್ಥಿಸೋಣ.
J5. ಲೂಕ 1:74 ನಮ್ಮ ಜೀವಮಾನದಲ್ಲೆಲ್ಲಾ ಭಯವಿಲ್ಲದವರಾಗಿದ್ದು ಆತನ ಸನ್ನಿಧಿಯಲ್ಲಿ ನಿರ್ಮಲಚಿತ್ತದಿಂದಲೂ ನೀತಿಯಿಂದಲೂ ದೇವರನ್ನು ಸೇವಿಸಲು ದೇವರು ನಮಗೆ ಕೃಪೆ ಕೊಡುವುದಕ್ಕಾಗಿ ಪ್ರಾರ್ಥಿಸೋಣ.
J6. ಲೂಕ 4:1 ಈ ಅಡವಿಯ ಪಯಣದಲ್ಲಿ ನಮ್ಮ ಬದುಕು ಯಾವಾಗಲು ಪವಿತ್ರಾತ್ಮಭರಿತರಾಗಿ ದೇವರಾತ್ಮನು ನಮ್ಮನ್ನು ನಿತ್ಯತೆವರೆಗೆ ಮಾರ್ಗನಡೆಸುವುದಕ್ಕಾಗಿ ಪ್ರಾರ್ಥಿಸೋಣ.
J7. ಲೂಕ 5:26 ಅದ್ಬುತಗಳನ್ನು ಮಾಡುವ ದೇವರು ಅಪೂರ್ವ ಸಂಗತಿಗಳನ್ನು ನೋಡಿ ನಾವು ಬೆರಗಾಗಿ ಆತನನ್ನು ಕೊಂಡಾಡಿ ದೇವರ ಭಯದಿಂದ ತುಂಬಿದವರಾಗುವುದಕ್ಕಾಗಿ ಪ್ರಾರ್ಥಿಸೋಣ.
J8. ಯೋಹಾನ 1:14 ಯೇಸುವಿನ ಹಾಗೆ ನಾವು ಈ ಮರುಳುಗಾಡಿನಲ್ಲಿ ವಾಸಿಸುವಾಗ ನಮ್ಮ ಬದುಕು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವರಾಗಿ ಮಹಿಮೆಯಿಂದ ಕಾಣಲ್ಪಡುವುದಕ್ಕಾಗಿ ಪ್ರಾರ್ಥಿಸೋಣ.
J9. ಯೋಹಾನ 4:34 ನಮ್ಮ ಯೇಸುವಿನಂತೆ ನಾವು ಕಳುಹಿಸಲ್ಪಟ್ಟವರಾಗಿ ದೇವರ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದು ನಮ್ಮ ಆಹಾರವಾಗುವುದಕ್ಕಾಗಿ ಪ್ರಾರ್ಥಿಸೋಣ.
J10. ಯೋಹಾನ 6:37 ನಾವು ದೇವರಿಂದ ಯೇಸುವಿಗೆ ಕೊಡಲ್ಪಟ್ಟವರಾಗಿ ಯೇಸುವಿನ ಬಳಿಗೆ ಬಂದು ಯೇಸು ನಮ್ಮನ್ನು ಎಂದಿಗೂ ತಳ್ಳಿಬಿಡದಿರುವುದಕ್ಕಾಗಿ (ದೊಂಬಿಬಿಡದಿರುವುದಕ್ಕಾಗಿ) ಪ್ರಾರ್ಥಿಸೋಣ.
J11. ಯೋಹಾನ 14:13,14 ನಾವು ಯೇಸುವಿನ ಹೆಸರಿನಲ್ಲಿ ಬೀಡಿಕೊಳ್ಳುವುದೆಲ್ಲವೂ ಮಗನ ಮೂಲಕ ತಂದೆಗೆ ಮಹಿಮೆ ಉಂಟಾಗುವುದಕ್ಕಾಗಿ ಯೇಸು ನಮಗೆ ಮಾಡುವುದಕ್ಕಾಗಿ ಪ್ರಾರ್ಥಿಸೋಣ.
J12. ಯೋಹಾನ 14:26 ಪವಿತ್ರಾತ್ಮನೆಂಬ ಸಹಾಯಕನು ಎಲ್ಲವನ್ನು ನಮಗೆ ಉಪದೇಶಿಸಿ ಯೇಸು ಹೇಳಿದೆಲ್ಲವನ್ನು ನಮ್ಮ ನೆನಪಿಗೆ ತರುವುದಕ್ಕಾಗಿ ಪ್ರಾರ್ಥಿಸೋಣ.
J13. ಯೋಹಾನ 15:2,3 ನಾವು ದೇವರಿಗೆ ಹೆಚ್ಚು ಫಲಕೊಡುವವರಾಗಿ ನಮ್ಮನ್ನು ಶುದ್ಧಮಾಡುವುದಕ್ಕಾಗಿ, ನಾವು ಶುದ್ಧರಾಗುವುದಕ್ಕಾಗಿ ಯೇಸು ನಮ್ಮೊಂದಿಗೆ ಮಾತನಾಡುವುದಕ್ಕಾಗಿ ಪ್ರಾರ್ಥಿಸೋಣ.
J14. ಯೋಹಾನ 15:11 ಯೇಸುವಿನಲ್ಲಿರುವ ಆನಂದವು ನಮ್ಮಲ್ಲಿ ಇರಬೇಕೆಂತಲೂ ಯೇಸು ನಮ್ಮೊಂದಿಗೆ ಮಾತನಾಡಿ ಅದರಿಂದ ನಮ್ಮ ಆನಂದವು ಪರಿಪೂರ್ಣವಾಗಬೇಕೆಂತಲೂ ನಾವು ಆತನ ಆಜ್ಞೆಗಳ್ಳನ್ನು ಪಾಲಿಸುವುದಕ್ಕಾಗಿ ಪ್ರಾರ್ಥಿಸೋಣ.
J15. ಯೋಹಾನ 16:24 ನಾವು ಯೇಸುವಿನ ಹೆಸರಿನಲ್ಲಿ ಬೇಡಿಕೊಳ್ಳುವುದೆಲ್ಲವು ದೇವರು ನಮಗೆ ಕೊಟ್ಟು ಅದರಿಂದ ನಮ್ಮ ಆನಂದವೂ ಪರಿಪೂರ್ಣವಾಗುವುದಕ್ಕಾಗಿ ಪ್ರಾರ್ಥಿಸೋಣ.
Administrator